ಕನಿಷ್ಠ ಬೆಂಬಲ ಯೋಜನೆಯಡಿ ಭತ್ತ, ರಾಗಿ, ಜೋಳ ಖರೀದಿ
ಬಳ್ಳಾರಿ : ಪ್ರಸ್ತಕ ಸಾಲಿನಲ್ಲಿ ಮುಂಗಾರು ಋತುವಿನ ಕನಿಷ್ಠ ಬೆಂಬಲ ಯೋಜನೆಯಡಿ ಭತ್ತ, ರಾಗಿ, ಜೋಳ ಖರೀದಿ ಮಾಡಲಾಗುವುದು ಎಂದು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರಾದ ಸಕೀನ ಅವರು ತಿಳಿಸಿದ್ದಾರೆ.
ಬೆಲೆ:
ಭತ್ತ ಕ್ವಿಂಟಾಲ್‌ಗೆ ರೂ.2300, ರಾಗಿ ಕ್ವಿಂಟಾಲ್‌ಗೆ ರೂ.4290, ಬಿಳಿ ಜೋಳ(ಮಾಲ್ದಂಡಿ) ಕ್ವಿಂಟಾಲ್‌ಗೆ ರೂ.3421, ಬಿಳಿಜೋಳ (ಹೈಬ್ರಿಡ್ ) ಕ್ವಿಂಟಾಲ್‌ಗೆ ರೂ.3371 ನಂತೆ ಖರೀದಿಸಲು ನಿಗದಿಯಾಗಿರುತ್ತದೆ.
ಖರೀದಿ ಕೇಂದ್ರ:
ಜಿಲ್ಲೆಯಲ್ಲಿ ಬಳ್ಳಾರಿಯ ಎಪಿಎಂಸಿ, ಮೋಕಾ, ಕುರುಗೋಡು, ಕಂಪ್ಲಿ, ಸಿರುಗುಪ್ಪ, ಕರೂರು ಮತ್ತು ಹಚ್ಚೋಳ್ಳಿ ಸೇರಿದಂತೆ ಒಟ್ಟು 08 ಖರೀದಿ ಕೇಂದ್ರಗಳನ್ನು ಗುರುತಿಸಲಾಗಿದೆ.
ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಈಗಾಗಲೇ ಟಾಸ್ಕ್ಫೋರ್ಸ್ ಸಮಿತಿ ಸಭೆ ನಡೆಸಿ ಸಿದ್ಧತೆ ಮಾಡಿಕೊಳ್ಳಲು ಸಂಬAಧಪಟ್ಟ ಏಜೆನ್ಸಿಯವರಿಗೆ ಸೂಚನೆ ನೀಡಲಾಗಿದೆ. ಖರೀದಿ ಕೇಂದ್ರ ಮತ್ತು ಉಗ್ರಾಣ ಕೇಂದ್ರಗಳಿಗೆ ಗ್ರೇಡರ್‌ಗಳನ್ನು ನೇಮಿಸಿಕೊಳ್ಳಲಾಗಿದ್ದು, ತರಬೇತಿ ಕಾರ್ಯ ಪ್ರಾರಂಭವಾಗಿದೆ. ಗೋಣಿಚೀಲ, ಸಾಗಾಣಿಕೆ ಕುರಿತು ಸೂಕ್ತ ನಿರ್ದೇಶನ ನೀಡಲಾಗಿದೆ.
ನೋಂದಣಿಗೆ ಎನ್‌ಐಸಿ ತಂತ್ರಾಂಶವನ್ನು ಅಭಿವೃದ್ಧಿಗೊಳಿಸಲಾಗುತ್ತಿದ್ದು, ಮುಂದಿನ ಮೂರು ದಿನಗಳೊಗಾಗಿ ಎಲ್ಲಾ ಖರೀದಿ ಕೇಂದ್ರಗಳನ್ನು ಚಾಲನೆಗೊಳಿಸಿ, ರೈತರ ನೋಂದಣಿ ಕಾರ್ಯವನ್ನು ಕೈಗೊಳ್ಳಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
----------