ಕಂಪ್ಲಿ.ನ.19:ಜೆಸಿಐ ಕಂಪ್ಲಿ ಸೋನಾದ-2025 ರ ನೂತನ ಅಧ್ಯಕ್ಷರಾಗಿ ಬಿ.ರಸೂಲ್ ಉಪಾಧ್ಯಕ್ಷರಾಗಿ ಡಾ.ಭರತ ಪದ್ಮಶಾಲಿ ಕಾರ್ಯದರ್ಶಿಯಾಗಿ ಎಸ್.ಕೆ.ಇಮ್ತಿಯಾಜ್ ಅವರು ಮಂಗಳವಾರ ಅವಿರೋಧವಾಗಿ ಆಯ್ಕೆಯಾದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸಂಜೆ ಜರುಗಿದ ಜೆ.ಸಿ.ಐ ಕಂಪ್ಲಿ ಸೋನಾದ ನೂತನ ಅಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಬಿ.ರಸೂಲ್ ಉಪಾಧ್ಯಕ್ಷರಾಗಿ ಡಾ.ಭರತ ಪದ್ಮಶಾಲಿ ಕಾರ್ಯದರ್ಶಿಯಾಗಿ ಎಸ್.ಕೆ.ಇಮ್ತಿಯಾಜ್ ಅವರನ್ನು ಸದಸ್ಯರ ಸರ್ವಾನುಮತದಿಂದ ಜೆಸಿಐ ಕಂಪ್ಲಿ ಸೋನಾ ಘಟಕದ ನೂತನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ವಲಯ-24ರ ಉಪಾಧ್ಯಕ್ಷ ಹಾಗೂ ಚುನಾವಣಾಧಿಕಾರಿ ಸಂತೋಷ ಕೊಟ್ರಪ್ಪ ಸೋಗಿ ತಿಳಿಸಿದರು.
ಬಳಿಕ ಕಂಪ್ಲಿ ಜೆಸಿಐ ಸೋನಾ-2024 ರ ನೂತನ ಅಧ್ಯಕ್ಷರಾದ ಬಿ.ರಸೂಲ್ ಮಾತನಾಡಿ ಯುವ ಜನತೆಯಲ್ಲಿ ಗುಣಾತ್ಮಕ ಬದಲಾವಣೆ ಸೃಷ್ಟಿಸಿ ಸದೃಢಗೊಳಿಸಲು ಅಭಿವೃದ್ಧಿಯ ಅವಕಾಶ ಒದಗಿಸುವುದು ಜೆಸಿಐ ನ ಮೂಲ ಧ್ಯೇಯವಾಗಿದೆ. ಜೆಸಿಐ ಕಂಪ್ಲಿ ಸೋನಾದ ಎಲ್ಲಾ ಪದಾಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು, ವರ್ಷವಿಡೀ ಹೆಚ್ಚು ಹೆಚ್ಚು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಳ್ಳುವ ಮೂಲಕ ವಲಯ ಮಟ್ಟದಲ್ಲಿ ನಮ್ಮ ಘಟಕದಿಂದ ಉತ್ತಮ ಸಾಧನೆ ಮಾಡಲಾಗುವುದು ಎಂದು ತಿಳಿಸಿದರು.
ಇದೇ ವೇಳೆ ಜೆಸಿಐ ಕಂಪ್ಲಿ ಸೋನಾದ ನೂತನ ಕಾರ್ಯದರ್ಶಿ ಎಸ್.ಕೆ.ಇಮ್ತಿಯಾಜ್ ಮಾತನಾಡಿ ಜೆಸಿಐ ಕಂಪ್ಲಿ ಸೋನಾ ಘಟಕದ ಹಿರಿಯ ಹಾಗೂ ಕಿರಿಯ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗಲಾಗುವುದು ಎಂದು ತಿಳಿಸಿದರಲ್ಲದೆ,ನೂತನ ಪದಾಧಿಕಾರಿಗಳನ್ನು ಶೀಘ್ರವಾಗಿ ಆಯ್ಕೆ ಮಾಡಿ ಪದಗ್ರಹಣ ಸಮಾರಂಭವನ್ನು ಆಯೋಜಿಸಿಲಾಗುವುದು ಎಂದರು.
ಇದೇ ವೇಳೆ ನೂತನವಾಗಿ ಅಯ್ಕೆಯಾದ ಅಧ್ಯಕ್ಷ ಬಿ.ರಸೂಲ್ ಉಪಾಧ್ಯಕ್ಷ ಡಾ.ಭರತ ಪದ್ಮಶಾಲಿ ಹಾಗೂ ಕಾರ್ಯದರ್ಶಿ ಎಸ್.ಕೆ.ಇಮ್ತಿಯಾಜ್ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಜೆಸಿಐ ಕಂಪ್ಲಿ ಸೋನಾದ ನಿಕಟ ಪೂರ್ವಾಧ್ಯಕ್ಷರಾದ ಸುಹಾಸ ಚಿತ್ರಗಾರ,ಜಂಟಿ ಕಾರ್ಯದರ್ಶಿ ಅಮರನಾಥ ಶಾಸ್ತ್ರಿ,ಪೂರ್ವಾಧ್ಯಕ್ಷರಾದ ಪ್ರಸಾದ ಗಡಾದ,ರಾಕೇಶ ಬಾಗ್ರೇಚಾ,ವಾಸಿಂ ಫಯಾಜ್,ಬಡಿಗೇರಜಿಲಾನಸಾಬ್,ಡಿ.ಮಂಜೇಶ,ಪದಾಧಿಕಾರಿ ಗುರುಪ್ರಸನ್ನ ಯುಮುಖಂಡರಾದ ಅಕ್ಕಿಜಿಲಾನ್,ಡಿ.ಇಸ್ಮಾಯಿಲ್,ರಾಜ,ಇಸಾಕ್,ರಿಯಾಜ್,ಸೇರಿದಂತೆ ಅನೇಕರಿದ್ದರು.