ಕಂಪ್ಲಿ : ಕಂಪ್ಲಿಯ ನಿವೇದಿತಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕರ್ನಾಟಕ ರಾಜ್ಯೋತ್ಸವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ನಿವೇದಿತಾ ಆಂಗ್ಲ ಮಾಧ್ಯಮ ಶಾಲೆ ಮುಖ್ಯ ಶಿಕ್ಷಕ ಎಚ್ ಮರಿಯಪ್ಪ ಮಾತನಾಡಿ ಕನ್ನಡವೇ ಸತ್ಯ, ಕನ್ನಡವೇ ನಿತ್ಯ, ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ, ಬೇರೆ ಭಾಷೆಯನ್ನು ಕಲಿಯುವುದರ ಜೊತೆಗೆ ನಮ್ಮ ಮಾತೃಭಾಷೆ ಮೂಲ ಸಾರವನ್ನು ತಿಳಿಯಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿ ನಮ್ಮ ನಾಡು ಇದೆ ಅಂದರೆ ತಪ್ಪಾಗಲಾರದು, ನಮ್ಮ ನೆಲದಲ್ಲಿ ನಮ್ಮ ತಾಯಿಗೆ ಮೊದಲ ಆದ್ಯತೆ ನೀಡಬೇಕು.
ಕನ್ನಡ ಸಾಹಿತ್ಯಕ್ಕೆ ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಅಂತಹ ಸಾಹಿತ್ಯವನ್ನು ನಾವು ತಿಳಿಯುದರ ಜೊತೆಗೆ ನಮ್ಮ ಮಕ್ಕಳಿಗೆ ತಿಳಿಸುವ ಪ್ರಯತ್ನ ಮಾಡಬೇಕಾಗಿರುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.
ಕನ್ನಡ ರಾಜ್ಯೋತ್ಸವ ಅಂದರೆ ಕನ್ನಡ ನೆಲದ ಹಬ್ಬ ಈ ಹಬ್ಬವನ್ನು ವರ್ಷದ ಒಂದು ದಿನ ಮಾತ್ರವಲ್ಲದೆ, ಪ್ರತಿದಿನವೂ ಈ ಕನ್ನಡ ಹಬ್ಬವನ್ನು ಆಚರಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಸಹ ಶಿಕ್ಷಕ/ಶಿಕ್ಷಕಿಯರು ಸೇರಿದಂತೆ ವಿದ್ಶಾರ್ಥಿಗಳು ಉಪಸ್ಥಿತರಿದ್ದರು.