Gadag :ಗೋಲ್ಡ್ ಕ್ವಾಯಿನ್ಸ್ ವಂಚಕರು ಬರಬಹುದು.. ಹುಷಾರ್ ಹುಷಾರ್

ಶಿರಹಟ್ಟಿ : ಗೋಲ್ಡ್ ಕ್ವಾಯಿನ್ಸ್ ವಂಚಕರು ಬರಬಹುದು.. ಹುಷಾರ್ ಹುಷಾರ್

ಕಡಿಮೆ ಹಣಕ್ಕೆ ಬಂಗಾರ ಕೊಡಿಸುತ್ತೇವೆ ಅಂತ ಲಕ್ಷಾಂತರ ರೂ.ಪಂಗನಾಮ ಹಾಕಿರೋ ಘಟನೆ ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನಲ್ಲಿ ನಡೆದಿದೆ.

ಡಿ.13 ರಂದು ಘಟನೆ ನಡೆದಿದ್ದು, ಶಿರಹಟ್ಟಿ ತಾಲೂಕಿನ ಹೊಳೆ ಇಟಗಿ ಗ್ರಾಮದ ಬಳಿ,‌ಇಬ್ಬರು ಬಂಗಾರದ ವ್ಯಾಪಾರಿಗಳಂತೆ ವರ್ತಿಸಿ, ವೆಂಕಟೇಶ ಅನ್ನುವ ವ್ಯಕ್ತಿಗೆ ಕಡಿಮೆ ದರದಲ್ಲಿ ಬಂಗಾರದ‌ ನಾಣ್ಯಗಳನ್ನ ಕೊಡಿಸುತ್ತೇವೆ ಅಂತ ನಂಬಿಸಿ ಮೋಸ ಮಾಡಿದ್ದಾರೆ.



ಮೊದಲು ಒಂದು ಗ್ರಾಮ ತೂಕದ ಎರಡು ಅಸಲಿ ನಾಣ್ಯಗಳನ್ನು ಕೊಟ್ಟು ವೆಂಕಟೇಶನಿಗೆ ನಂಬಿಸಿದ್ದಾರೆ. ಹೀಗೆ ಅಸಲಿ ಬಂಗಾರದ ನಾಣ್ಯಗಳನ್ನ ‌ನೋಡಿದ‌ ವೆಂಕಟೇಶ, ವಂಚಕರಿಗೆ ಮಾರು ಹೋಗಿ, ಬರೊಬ್ಬರಿ ₹ 6,50,000/- ರೂಗಳನ್ನು ವಂಚಕರಿಗೆ ಕೊಟ್ಟಿದ್ದಾನೆ. ಇದಕ್ಕೆ ಪ್ರತಿಯಾಗಿ ವಂಚಕರು ವೆಂಕಟೇಶನಿಗೆ 170 ಗ್ರಾಂ ಬಂಗಾರದ ನಾಣ್ಯಗಳನ್ನು ಕೊಟ್ಟಿದ್ದಾರೆ.

ನಂತರ ಬಂಗಾರದ ನಾಣ್ಯಗಳೆನ್ನೆಲ್ಲ ವೆಂಕಟೇಶ್ ಪರೀಕ್ಷೆ ಮಾಡಿಸಿದ್ದಾನೆ. ಎಲ್ಲ ನಾಣ್ಯಗಳೂ ನಕಲಿ ಎನ್ನುವದು ಗೊತ್ತಾಗಿದೆ. ಬಳಿಕ ಗೋಲ್ಡ್ ಕ್ವಾಯಿನ್ಸ್ ಕೊಟ್ಟವರನ್ನ ಅದೆಷ್ಟೇ ಸಂಪರ್ಕಿಸಲು ಹೋದರೂ ಸಂಪರ್ಕಕ್ಕೆ ಸಿಗದೇ ಎಸ್ಕೇಪ್ ಆಗಿದ್ದಾರೆ.

ಕಂಗಾಲಾದ ವೆಂಕಟೇಶ್ ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು, ವಂಚಕರಿಗಾಗಿ ಬಲೆ ಬೀಸಿದ್ದಾರೆ. ನಿಮ್ಮ ಬಳಿಯೂ ಗೋಲ್ಡ್ ಕ್ವಾಯಿನ್ಸ್ ವಂಚಕರು ಬರಬಹುದು.. ಯಾವುದಕ್ಕೂ ಹುಷಾರಾಗಿರಿ!

 ವರದಿ: ವೀರೇಶ್ ಗುಗ್ಗರಿ

Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">