ಕಂಪ್ಲಿ : ಇಂದು ರಾತ್ರಿ ಶೋ ನಲ್ಲಿ ಮಿಂಚಲಿರುವ "ಪುಷ್ಪ-2" ಸಿನಿಮಾದ ಟಿಕೆಟ್ ಗಾಗಿ ಅಲ್ಲು ಅಭಿಮಾನಿಗಳು ಕಾದು ನಿಂತಿರುವ ದೃಶ್ಯ ನಗರದ ಚಂದ್ರಕಲಾ ಚಿತ್ರಮಂದಿರದಲ್ಲಿ ಕಂಡುಬಂದಿತು.
ಇನ್ನು ಇಂದೇ ಚಂದ್ರಕಲಾ ಚಿತ್ರಮಂದಿರ ಹೌಸ್ ಪುಲ್ ಆಗಿದ್ದು, ಈಗಾಗಲೇ ಬಹಳಷ್ಟು ಅಭಿಮಾನಿಗಳು ಟಿಕೆಟ್ ಬುಕ್ ಮಾಡಿದ್ದಾರೆ, ಇನ್ನು ಕೆಲವರು ಟಿಕೆಟ್ ಗಾಗಿ ನುಕೂ-ನುಗ್ಗಲು ನಡಿಯುತ್ತಿದ್ದು, ಶಾಂತಿ-ಸುವ್ಯವಸ್ಥೆಗಾಗಿ ಕಂಪ್ಲಿ ಪೋಲಿಸರು ಕಣ್ಗಾವಲಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಬಿಡುಗಡೆಗೂ ಮುನ್ನವೇ ದಾಖಲೆ ಬರೆಯುತ್ತಿರುವ ಪುಷ್ಪ 2 ಚಿತ್ರ ಬಿಡುಗಡೆಯ ನಂತರ ಇನ್ನೆಷ್ಟು ದಾಖಲೆಗಳನ್ನು ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ. ಒಟ್ಟು 11,500 ಸ್ಕ್ರೀನ್ಗಳಲ್ಲಿ, ಭಾರತದಲ್ಲಿ 6,500 ಸ್ಕ್ರೀನ್ಗಳು ಮತ್ತು ವಿದೇಶದಲ್ಲಿ 5,000 ಸ್ಕ್ರೀನ್ ಗಳಲ್ಲಿ ಪುಷ್ಪರಾಜ್ ಮಿಂಚಲಿದ್ದಾರೆ.
ಪುಷ್ಪ ದಿ ರೂಲ್ ಸಿನಿಮಾ ಪುಷ್ಪ ದಿ ರೈಸ್ ಚಿತ್ರದ ಮುಂದುವರಿದ ಭಾಗವಾಗಿ ಬರುತ್ತಿದೆ. ಸುಕುಮಾರ್ ನಿರ್ದೇಶನದಲ್ಲಿ ಮೈತ್ರಿ ಮೂವಿ ಮೇಕರ್ಸ್ ಈ ಚಿತ್ರವನ್ನು ಭಾರಿ ಬಜೆಟ್ನಲ್ಲಿ ನಿರ್ಮಿಸುತ್ತಿದೆ. ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದರೆ, ಫಹಾದ್ ಫಾಜಿಲ್, ಸುನೀಲ್, ಅನಸೂಯಾ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ರಘುವೀರ್, ಸಿದ್ದಿ ಟಿವಿ, ಕಂಪ್ಲಿ (6360633266)