ಕಂಪ್ಲಿ ಪುರಸಭೆ: ಮನೆ ಕಾಮಗಾರಿ ಪೂರ್ಣಗೊಳಿಸಲು ಸೂಚನೆ
ಬಳ್ಳಾರಿ : ಕಂಪ್ಲಿ ಪುರಸಭೆ ವ್ಯಾಪ್ತಿಯಲ್ಲಿ 2010-11 ರಿಂದ 2018-19ನೇ ಸಾಲಿನ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿವಿಧ ನಗರ ವಸತಿ ಯೋಜನೆಗಳಡಿ ವಸತಿ ಸೌಲಭ್ಯಕ್ಕಾಗಿ ಆಯ್ಕೆಯಾಗಿರುವ ಫಲಾನುಭವಿಗಳು ಕೂಡಲೇ ತಮ್ಮ ಮನೆಯ ಪೂರ್ಣಗೊಳಿಸಿಕೊಳ್ಳುವಂತೆ ಪುರಸಭೆ ಮುಖ್ಯಾಧಿಕಾರಿಯವರು ತಿಳಿಸಿದ್ದಾರೆ.
ಈಗಾಗಲೇ ಹಲವಾರು ಬಾರಿ ನೋಟಿಸ್ ಜಾರಿ ಮಾಡಲಾಗಿದ್ದು, ಫಲಾನುಭವಿಗಳು ಮನೆಯ ಕಟ್ಟಡವನ್ನು ಡಿ.05 ರೊಳಗೆ ಪೂರ್ಣಗೊಳಿಸಿಕೊಳ್ಳಬೇಕು. ಇಲ್ಲವಾದಲ್ಲಿ ಈಗಾಗಲೇ ಬಿಡುಗಡೆಯಾಗಿರುವ ಪೂರ್ಣ ಪ್ರಮಾಣದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಾಯಧನ ಹಿಂದಿರುಗಿಸಲು ಬೆಂಗಳೂರು ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರ ಕಚೇರಿ ಫಲಾನುಭವಿಗಳಿಗೆ ತಿಳಿಸಿ ನೋಟಿಸ್ ಜಾರಿ ಮಾಡುವಂತೆ ತಿಳಿಸಿದೆ.
ಹಾಗಾಗಿ ವಿವಿಧ ನಗರ ವಸತಿ ಸೌಲಭ್ಯಕ್ಕಾಗಿ ಆಯ್ಕೆಯಾದ ಫಲಾನುಭವಿಗಳು ಮನೆ ಕಟ್ಟಡ ಹಂತ ಹಂತವಾಗಿ ನಿರ್ಮಾಣ ಮಾಡಿಕೊಂಡು ಕಂಪ್ಲಿ ಪುರಸಭೆಯ ಆಶ್ರಯ ಶಾಖೆಯ ವಿಷಯ ನಿರ್ವಾಹಕರ ಗಮನಕ್ಕೆ ತಂದು ಜಿ.ಪಿ.ಎಸ್ ಮಾಡಿಸಿಕೊಳ್ಳಬೇಕು.
ಇಲ್ಲವಾದಲ್ಲಿ ರಾಜ್ಯ ಮತ್ತು ಕೇಂದ್ರ ಸಹಾಯಧನ ಬಿಡುಗಡೆ ಆಗುವುದಿಲ್ಲ. ಇದಕ್ಕೆ ಕಂಪ್ಲಿ ಪುರಸಭೆಯು ಹೊಣೆಯಾಗಿರುವುದಿಲ್ಲ. ಈ ಕುರಿತು ಮನೆ ನಿರ್ಮಾಣ ವಿಳಂಬಕ್ಕೆ ಮಂಜೂರಾದ ಮನೆ ರದ್ದು ಪಡಿಸಲು ಸರ್ಕಾರಕ್ಕೆ ನಿಯಮಾನುಸಾರ ಶಿಫಾರಸ್ಸು ಮಾಡಲಾಗುವುದು ಎಂದು ಕಂಪ್ಲಿ ಪುರಸಭೆ ಮುಖ್ಯಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.