ಕಂಪ್ಲಿ: 6 ಕುರಿಗಳನ್ನು ಕೊಂದು ತಿಂದ ಚಿರತೆ ಸೋಮಲಾಪುರ ಗ್ರಾಮದ ಗಂಗಮ್ಮ ತೋಟದ ಬಳಿ ನಾಯಕರ ಪಂಪಣ್ಣ ಅವರಿಗೆ ಸೇರಿದ ಕುರಿ ಮಂದೆ ಮೇಲೆ ನಿನ್ನೆ ಚಿರತೆ ಏಕಾಏಕಿ ದಾಳಿ ನಡೆಸಿ,ಆರು ಕುರಿಗಳನ್ನು ಕೊಂದು, ಏಳು ಕುರಿಗಳನ್ನು ಗಾಯಗೊಳಿಸಿದೆ.
ಚಿರತೆ ದಾಳಿ ಸಂದರ್ಭದಲ್ಲಿ ಕುರಿ ಮಂದೆಯಲ್ಲಿದ್ದ ಕುರಿಗಳೆಲ್ಲ ಬೆದರಿದ ಶಬ್ದಕ್ಕೆ ಎಚ್ಚೆತ್ತ ಪಂಪಣ್ಣ ಕೂಗಾಡುತ್ತಿದ್ದಂತೆ ಚಿರತೆ ಸ್ಥಳದಿಂದ ಓಡಿ ಹೋಗಿದೆ.
ಚಿರತೆ ದಾಳಿಯಿಂದ ಅಂದಾಜು 1. 50 ಲಕ್ಷ ನಷ್ಟವುಂಟಾಗಿದ್ದು, ಚಿರತೆ ಸೆರೆಗೆ ಬೋನ್ ಅಳವಡಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು
Tags
ಟಾಪ್ ನ್ಯೂಸ್