Kampli : ಅವಳಿ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರು ನಾಪತ್ತೆ : ಜಿಲ್ಲಾಧ್ಯಕ್ಷ ಗಂಗಾಧರ


ಅವಳಿ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರು ನಾಪತ್ತೆ : ಜಿಲ್ಲಾಧ್ಯಕ್ಷ ಗಂಗಾಧರ

ಕಂಪ್ಲಿ : ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗೆ ಸ್ಥಳೀಯ ಶಾಸಕರಿಗೆ ಸಚಿವ ಸ್ಥಾನ ನೀಡುವುದರ ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಬೇಕೆಂದು ಭಾರತೀಯ ಕೃಷಿ ಕಾರ್ಮಿಕ ರೈತ ಸಂಘದ ಮಾಜಿ ರಾಜ್ಯ ಸಂಘಟನಾ ಕಾರ್ಯದರ್ಶಿ ಸೈಯದ್ ಅಬೀದ್ ಭಾಷಾ ಖಾದ್ರಿ ಆಗ್ರಹಿಸಿದರು.ಕಂಪ್ಲಿ ಪಟ್ಟಣದ ಅತಿಥಿ ಗೃಹದ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರ ರಾಜ್ಯದ ರೈತರಿಗೆ ಕೃಷಿ ಚಟುವಟಿಕೆಗಳಿಗೆ ನೀಡುವ ಅನುದಾನ ನೀಡುವಲ್ಲಿ ಮಲತಾಯಿ ಧೋರಣೆ ಮಾಡುತ್ತಿದೆ. ಇದರಿಂದ ಅನ್ನದಾತರಿಗೆ ಅನ್ಯಾಯವಾಗಿದೆ. ಆದ್ದರಿಂದ ಕೂಡಲೇ ನಬಾರ್ಡ್‌ ನಿಂದ ಅನುದಾನ ಬಿಡುಗಡೆ ಮಾಡಬೇಕು.ಇಲ್ಲವಾದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟಕ್ಕೆ ಆಣಿಯಾಗ ಬೇಕಾಗುತ್ತದೆ. ಮತ್ತು ವಿಜಯನಗರ ಜಿಲ್ಲೆಗೆ ಪ್ರತ್ಯೇಕವಾಗಿ ಸಚಿವರನ್ನು ರಾಜ್ಯ ಸರ್ಕಾರ ನೇಮಕ ಮಾಡಬೇಕು. ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಗ್ರಹಣ ಹಿಡಿದಿದೆ. ಜಿಲ್ಲೆಗೆ ಸಚಿವ ಜಮೀರ್ ಅಹ್ಮದ್ ಉಸ್ತುವಾರಿ ಸಚಿವರಿದ್ದರೂ ಇಲ್ಲದಂತಾಗಿದ್ದು, ಅವರನ್ನು ಸಾಮಾನ್ಯ ರೈತರು, ಸಾರ್ವಜನಿಕರು ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ.ಎರಡು ಜಿಲ್ಲೆಗಳ ಅಭಿವೃದ್ಧಿ ಕುಂಠಿತವಾಗುವ ಜತೆಗೆ ರೈತರ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲದಂತಾಗಿದೆ. ಮತ್ತು ರೈತರ ಮತ್ತು ಜನರ ಕೈಗೆ ಸಿಗುತ್ತಿಲ್ಲ. ಬಳ್ಳಾರಿ ಜಿಲ್ಲೆಗೆ ಶಾಸಕ ಗಣೇಶ, ಶಾಸಕಿ ಅನ್ನಪೂರ್ಣ, ಈ.ತುಕಾರಾಂ ಇವರಲ್ಲಿ ಒಬ್ಬರಿಗೆ ಹಾಗೂ ವಿಜಯನಗರ ಜಿಲ್ಲೆಗೆ ಹಿರಿಯ ಶಾಸಕ ಗವಿಯಪ್ಪಗೆ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿದರು. 

ನಂತರ ಅಖಿಲ ಕರ್ನಾಟಕ ರಾಜ್ಯ ಕಿಸಾನ್ ಜಾಗೃತಿ ಸಂಘದ ಜಿಲ್ಲಾಧ್ಯಕ್ಷ ಬಿ.ಗಂಗಾಧರ ಮಾತನಾಡಿ, ಕಂಪ್ಲಿ ತಾಲೂಕು ವ್ಯಾಪ್ತಿಯಲ್ಲಿ ಸಾಕಷ್ಟು ರೈತರು ರೇಷ್ಮೆ ಬೆಳೆ ಬೆಳೆಯುತ್ತಾ ಬಂದಿದ್ದು, ರೇಷ್ಮೆ ಬೆಳೆಗಾರರಿಗೆ ಸಮರ್ಪಕವಾಗಿಸರ್ಕಾರದ ಯೋಜನೆಗಳು ರೇಷ್ಮೆ ರೈತರಿಗೆಸಮರ್ಪಕವಾಗಿ ದೊರಕುತ್ತಿಲ್ಲ. ಆದ್ದರಿಂದ ಕೂಡಲೇ ಕಂಪ್ಲಿಯಲ್ಲಿ ರೇಷ್ಮೆ ಇಲಾಖೆ ಕಛೇರಿ ತೆರೆಯಬೇಕು ಎಂದರು. ಜಿಲ್ಲಾ ಕಾರ್ಯದರ್ಶಿ ವಿಶ್ವನಾಥ, ಯುವ ಘಟಕ ಅಧ್ಯಕ್ಷ ಕೆ.ಹರ್ಷಿತ್, ತಾಲೂಕು ಅಧ್ಯಕ್ಷ ಗುಬಾಜಿ ರಾಮಾಂಜಿನಿ, ಗೌರವಾಧ್ಯಕ್ಷ ಹನುಮಂತ, ಉಪಾಧ್ಯಕ್ಷರಾದ ಗಾದಿಲಿಂಗಪ್ಪ, ಮಲ್ಲಿಕ್, ಸದಸ್ಯರಾದ ಲಕ್ಷ್ಮಿರೆಡ್ಡಿ, ಶಿವಪ್ಪ, ಸಿದ್ದಪ್ಪ ಹಾಗೂ ರೈತ ಸಂಘದ ರಾಜ್ಯ ಕಾರ್ಯದರ್ಶಿ ಉಷಾ ದೇವೇಂದ್ರ, ವಿಜಯನಗರ ಜಿಲ್ಲಾಧ್ಯಕ್ಷೆ ರತ್ನಮ್ಮ ಸುರೇಶ ಸೇರಿದಂತೆ ಇತರರು ಇದ್ದರು.

Previous Post Next Post

AD

 


Siddi TV

Contact Form

f="https://unpkg.com/video.js/dist/video-js.css" rel="stylesheet">