ಕಂಪ್ಲಿಯ SMGJ ಬಾಲಕರ ಪ್ರೌಢಶಾಲಾಯಲ್ಲಿ ಜಿಲ್ಲಾ ಸರ್ವೇಕ್ಷಣೆ ವಿಭಾಗ, ಜಿಲ್ಲಾ ಆರೋಗ್ಯ ಇಲಾಖೆ ಹಾಗೂ ಕಂಪ್ಲಿ ತಾಲೂಕು ಸಮುದಾಯ ಆರೋಗ್ಯ ಕೇಂದ್ರ ಮತ್ತು ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಕಂಪ್ಲಿ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರ ವತಿಯಿಂದ "ಇಲಿ ಜ್ವರ" ಕುರಿತು ಕ್ವಿಜ್ ಸ್ಪರ್ಧೆಯನ್ನು ನಗರದ ಷಾಮಿಯಾಚಾಂದ್ ಪ್ರೌಢಶಾಲಾಯಲ್ಲಿ ಆಯೋಜಿಸಲಾಯಿತ್ತು.
ಇನ್ನು ಈ ಕ್ವಿಜ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಿರೀಶ್, ದ್ವಿತೀಯ ಮಹೇಶ್, ತೃತೀಯ ಕೀರಣ್ ವಿಜೇತರಾಗಿದ್ದಾರೆ.
ಇನ್ನು ಈ ಸಂದರ್ಭದಲ್ಲಿ ವಿಜ್ಞಾನ ಶಿಕ್ಷಕ ಸುನೀಲ್, ಶಕುಂತಲಾ, ಡಿಎಸ್ಓ ಬಳ್ಳಾರಿ, ಅಜಯ್, ಕೆ.ಶೋಭಾ ಹಾಗೂ ಶಾಲಾ ಶಿಕ್ಷಕರು, ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ಈ ಕಾರ್ಯಕ್ರಮದ ಉದ್ದೇಶ ಹಾಗೂ ಜಾಗೃತಿ ಇನ್ನು ಹೆಚ್ಚಿನ ಜನರಿಗೆ, ವಿದ್ಯಾರ್ಥಿಗಳಿಗೆ ತಿಳಿಯಬೇಕಿದೆ ಆಗಾಗಿ ಕೇವಲ ಒಂದು ಶಾಲೆ, ಒಂದು ಸಂಸ್ಥೆಯಲ್ಲಿ ಕಾರ್ಯಕ್ರಮ ಆಯೋಜನೆ ಮಾಡುವುದಕ್ಕಿಂತ ತಾಲೂಕಿನ ಎಲ್ಲಾ ಶಾಲೆಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುವಿಕೆ ಅತ್ಯಮೂಲ್ಯವಾದದ್ದು, ಈ ನಿಟ್ಟಿನಲ್ಲಿ ಆರೋಗ್ಯ ಹಾಗೂ ಶಿಕ್ಷಣ ಇಲಾಖೆಯವರು ಎಚ್ಚೆತ್ತುಕೊಳ್ಳಬೇಕಿದೆ.
"ಕಂಪ್ಲಿಗೆ ಜಾಗೃತಿ ಬೇಕಾಗಿದೆ"
ಏನಿದು ಇಲಿ ಜ್ವರ?
ವೈಜ್ಞಾನಿಕವಾಗಿ ಲೆಪ್ಪೋಸ್ಪೆರೋಸಿಸ್ ಎಂದು ಕರೆಸಿಕೊಳ್ಳುವ ಈ ಇಲಿ ಜ್ವರ ಬರುವುದು ಲೆಪ್ರೊಸ್ಟ್ರ ಎಂಬ ಬ್ಯಾಕ್ಟಿರಿಯಾ ರೋಗಾಣುಗಳಿಂದ, ಪ್ರಾಣಿಗಳಿಂದ ಮಾನವರಿಗೆ ಹರಡುವ ಪ್ರಾಣಿಜನ್ಯ ರೋಗಗಳಲ್ಲಿ ಇದೂ ಒಂದು ಪ್ರಮುಖ ಕಾಯಿಲೆ. ಮುಖ್ಯವಾಗಿ ಇಲಿ, ಹೆಗ್ಗಣಗಳಿಂದ ಈ ರೋಗಾಣುಗಳು ಹರಡುವುದರಿಂದ ಇದಕ್ಕೆ ಇಲಿಜ್ವರವೆಂದು ಹೆಸರು. ಈ ರೋಗ ಕೇವಲ ಮನುಷ್ಯರನ್ನಷ್ಟೇ ಅಲ್ಲ ದನ, ಎಮ್ಮೆ, ಕುರಿ, ಮೇಕೆ, ಹಂದಿ, ನಾಯಿ, ಬೆಕ್ಕು, ವನ್ಯಮೃಗಗಳು ಹೀಗೆ ಬಹುತೇಕ ಪ್ರಾಣಿಗಳನ್ನು ಬಾಧಿಸುತ್ತದೆ.
ತಡೆಗಟ್ಟುವ ವಿಧಾನವನ್ನ ಸ್ಥಳೀಯ ಆರೋಗ್ಯ ಕೇಂದ್ರದಲ್ಲೇ ವಿಚಾರಿಸಿ.