Kampli: ವೃತ್ತ ನಾಮಕರಣ; ಅಕ್ಷೇಪಣೆಗಳಿಗೆ ಆಹ್ವಾನ


ವೃತ್ತ ನಾಮಕರಣ; ಅಕ್ಷೇಪಣೆಗಳಿಗೆ ಆಹ್ವಾನ

ಕಂಪ್ಲಿ : ಕಂಪ್ಲಿ ಪುರಸಭೆ ವ್ಯಾಪ್ತಿಯಲ್ಲಿ ಬರುವ ಕಂಪ್ಲಿ ಪಟ್ಟಣದ ಮುಖ್ಯರಸ್ತೆಯಿಂದ ಮಾರುಕಟ್ಟೆಗೆ ಹಾದುಹೋಗುವ ರಸ್ತೆಯಲ್ಲಿನ ಬಾಲಾಜಿ ಜುವೆಲರ್ಸ್ ಹತ್ತಿರದ ವೃತ್ತವನ್ನು ‘ವಾಸವಿ ವೃತ್ತ’ ಮತ್ತು  ಹಳೆ ಬಸ್ ನಿಲ್ದಾಣದ ಕುರುಗೋಡು ತೆರಳುವ ವೃತ್ತಕ್ಕೆ ‘ಶ್ರೀ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ’ ಎಂದು ನಾಮಕರಣ ಮಾಡಲು ಆಯಾ ಸಮುದಾಯದವರು ಮನವಿ ಸಲ್ಲಿಸಿದ್ದು, ಈ ಕುರಿತು ಪಟ್ಟಣದ ಸಾರ್ವಜನಿಕರಿಂದ ಆಕ್ಷೇಪಣೆಗಳಿದ್ದಲ್ಲಿ ಲಿಖಿತ ಮತ್ತು ಪೂರಕ ದಾಖಲೆಗಳೊಂದಿಗೆ ಪ್ರಕಟಣೆಗೊಂಡ 30 ದಿನಗಳೊಳಗಾಗಿ ಕಂಪ್ಲಿ ಪುರಸಭೆ ಕಚೇರಿಗೆ ಸಲ್ಲಿಸಬೇಕು. ಅವಧಿ ಮೀರಿ ಬಂದ ಮನವಿ ಅಥವಾ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಪುರಸಭೆ ಮುಖ್ಯಾಧಿಕಾರಿ ಕೆ.ದುರುಗಣ್ಣ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

--------

Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">