ಬೆಳಗ್ಗೆಯಿಂದಲೇ 'ಮ್ಯಾಕ್ಸ್' ಮ್ಯಾಜಿಕ್ ಶುರು; ಕಂಪ್ಲಿಯ ಚಂದ್ರಕಲಾ ಥಿಯೇಟರ್‌ನಲ್ಲಿ ಕಿಚ್ಚನ ಅಬ್ಬರ ಬಲು ಜೋರು!
ಕಂಪ್ಲಿ : ನಗರದ ಚಂದ್ರಕಲಾ ಚಿತ್ರಮಂದಿರದಲ್ಲಿ ಇಂದು ತೆರೆ ಕಾಣುತ್ತಿದೆ ಸ್ಯಾಂಡಲ್ ವುಡ್ ನ ಬಾದ್ ಷಾ ಕಿಚ್ಚ ಸುದೀಪ್ ನಟನೆಯ "ಮ್ಯಾಕ್ಸ್" ಸಿನಿಮಾ.
ಕಂಪ್ಲಿಯ ಚಂದ್ರಕಲಾ ಚಿತ್ರಮಂದಿರದಲ್ಲಿ ಇಂದು ಬೆಳಿಗ್ಗೆ ಫ್ಯಾನ್ಸ್ ಶೋ 7 ಗಂಟೆಯಿಂದಲೇ ಸಿನಿಮಾ ತೆರೆಕಂಡಿದ್ದು, ಅಭಿಮಾನಿಗಳು ಉತ್ಸಾಹ ಹಾಗೂ ಕುತೂಹಲದಿಂದ ಸಿನಿಮಾ ನೋಡುತ್ತಿದ್ದಾರೆ ಕಿಚ್ಚ ಫ್ಯಾನ್ಸ್.
ಮ್ಯಾಕ್ಸ್ ಕನ್ನಡ ಮಾತ್ರ ರಿಲೀಸ್
ಮ್ಯಾಕ್ಸ್ ಚಿತ್ರ ಕನ್ನಡದಲ್ಲಿ ಮಾತ್ರ ರಿಲೀಸ್ ಆಗಿದೆ. ಇಂದು ಕ್ರಿಸ್ಮಸ್ ಹಿನ್ನೆಲೆಯಲ್ಲಿಯೇ ಈ ಚಿತ್ರವನ್ನ ಇದೇ ದಿನ ರಿಲೀಸ್ ಮಾಡಲಾಗಿದೆ. ಹೆಚ್ಚಿನ ಶೋಗಳ ಮೂಲಕವೇ ಪ್ರೇಕ್ಷಕರನ್ನ ರಂಜಿಸೋಕೂ ಈ ಚಿತ್ರ ಬಂದಿದ್ದು. ಹಾಗೇನೆ ಎರಡೂವರೆ ವರ್ಷದ ಬಳಿಕವೇ ಬರ್ತಿರೋ ಕಿಚ್ಚನ ಸಿನಿಮಾ ಕೂಡ ಇದಾಗಿದೆ.
ಹಾಗಾಗಿಯೇ ಸಿನಿಮಾ ಪ್ರೇಮಿಗಳಲ್ಲಿ ಹಾಗೂ ಸುದೀಪ್ ಅಭಿಮಾನಿಗಳಲ್ಲಿ ಈ ಚಿತ್ರದ ಬಗ್ಗೆ ವಿಶೇಷ ಕುತೂಹಲ ಇದ್ದೇ ಇದೆ. ಹಾಗೇನೆ ಸುದೀಪ್ ಈ ಸಲ ಬೇರೆ ರೀತಿಯ ಕಥೆಯೊಂದಿಗೆ ಬಂದಿದ್ದಾರೆ. ವಿಭಿನ್ನ ಮತ್ತು ಸಿಂಪಲ್ ಅನಿಸೋ ಕಥೆ ಮೂಲಕವೇ ಎಂಟ್ರಿ ಕೊಟ್ಟಿದ್ದು ವಿಶೇಷ.
ಮ್ಯಾಕ್ಸ್ ಚಿತ್ರದಲ್ಲಿ ಕಿಚ್ಚ ಸುದೀಪ್ ಭರ್ಜರಿ ಆ್ಯಕ್ಷನ್ ಮಾಡಿದ್ದಾರೆ. ಚೇತನ್ ಡಿಸೋಜಾ ಸೇರಿದಂತೆ ಒಟ್ಟು ಮೂವರು ಈ ಚಿತ್ರಕ್ಕೆ ಆ್ಯಕ್ಷನ್ ಡೈರೆಕ್ಷನ್ ಮಾಡಿದ್ದಾರೆ. ಶೇಖರ್ ಚಂದ್ರ ಕ್ಯಾಮರಾ ವರ್ಕ್ ಮಾಡಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಕೊಟ್ಟಿದ್ದಾರೆ.
ಮ್ಯಾಕ್ಸ್ ಚಿತ್ರದಲ್ಲಿ ಸುದೀಪ್‌ಗೆ ಹೀರೋಯಿನ್ ಅಂತ ಯಾರೂ ಇಲ್ಲ. ಚಿತ್ರದ ಕಥೆಗೆ ನಾಯಕಿಯ ಅವಶ್ಯಕತೆ ಇಲ್ವೇ ಇಲ್ಲ ಅನ್ನೋದನ್ನ ಸ್ವತಃ ಸುದೀಪ್ ಹೇಳಿಕೊಂಡಿದ್ದಾರೆ. ಆದರೆ, ಪ್ರಮುಖ ಪಾತ್ರಗಳಲ್ಲಿ ವರಲಕ್ಷ್ಮಿ ಶರತ್‌ಕುಮಾರ್ ಇದ್ದಾರೆ. ಕನ್ನಡದ ನಟಿಯರಾದ ಸಂಯುಕ್ತಾ ಹೊರನಾಡ್ ಅಭಿನಯಿಸಿದ್ದಾರೆ. ಸುಕೃತಾ ವಾಗ್ಲೆ ಸಹ ಇಲ್ಲಿ ಅದ್ಭುತವಾಗಿಯೇ ಅಭಿನಯಿಸಿದ್ದಾರೆ. ಇವರೆಲ್ಲರ ಈ ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ ಅಂತಲೇ ಹೇಳಬಹುದು.