ಸಂವಿಧಾನ ಸಂರಕ್ಷಣೆ ಮಹಾ ಒಕ್ಕೂಟದ ವತಿಯಿಂದ ಸೋಮವಾರ "ಕಂಪ್ಲಿ ಬಂದ್" ಗೆ ಕರೆ
ಕಂಪ್ಲಿ : ಇತ್ತೀಚೆಗೆ ನಡೆದ ಸದನದಲ್ಲಿ ಕೇಂದ್ರ ಗೃಹ ಸಚಿವ ಅಮೀತ್ ಶಾ ರವರ ಹೇಳಿಕೆ ಖಂಡಿಸಿ ಸೋಮವಾರದಂದು ಸಂವಿಧಾನ ಸಂರಕ್ಷಣೆ ಮಹಾ ಒಕ್ಕೂಟದ ವತಿಯಿಂದ "ಕಂಪ್ಲಿ ಬಂದ್" ಗೆ ನಿನ್ನೆ ಶಾರದ ಶಾಲಾ ಆವರಣದಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು.
ಪ್ರತಿಭಟನೆಯು ಪಾಠಶಾಲೆಯಿಂದ ನಗರದ ಪ್ರಮುಖ ಬೀದಿಗಳಲ್ಲಿ ಸಂಚಾರಿಸಿ ಅಂಬೇಡ್ಕರ್ ಸರ್ಕಲ್ ನಲ್ಲಿ ಸಮಾವೇಶಗೊಳ್ಳಲಿದೆ.
ಇನ್ನು ಈ ಪ್ರತಿಭಟನೆಯು ಶಾಂತ ರೀತಿಯಲ್ಲಿ ನಡೆಸಿ, ಸರ್ಕಲ್ ನಲ್ಲಿ ಪ್ರತಿಕೃತಿ ದಹಿಸಲಾಗುವುದು ಎಂದು ಸಭೆಯಲ್ಲಿ ಹೇಳಿದರು.
ಸಭೆಯಲ್ಲಿ ಸಂವಿಧಾನ ಸಂರಕ್ಷಣಾ ಮಹಾ ಒಕ್ಕೂಟ ಹಾಗೂ ವಿವಿಧ ಸಂಘಟನೆಗಳ ಸದಸ್ಯರು, ದಲಿತ ಯುವಕರು ಭಾಗಿಯಾಗಿದ್ದರು.
Tags
ಟಾಪ್ ನ್ಯೂಸ್