Kampli : ಶಾಸಕರ ಗೃಹ ಕಛೇರಿಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ರವರಿಗೆ ಶ್ರದ್ದಾಂಜಲಿ ಕಾರ್ಯಕ್ರಮ

AD

 



ಕಂಪ್ಲಿ: ಮಾಜಿ ಪ್ರಧಾನಿ ದಿ.ಡಾ.ಮನಮೋಹನ್ ಸಿಂಗ್ ಅವರು ದೇಶಕಂಡ ಅಪ್ರತಿಮ ಆರ್ಥಿಕ ತಜ್ಞರಾಗಿ ದೇಶದ ಆರ್ಥಿಕತೆಯ ಧೃಢತೆಗೆ ಕೊಡುಗೆ ನೀಡಿದ್ದಾರೆ ಎಂದು ಕಂಪ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಶ್ರೀನಿವಾಸರಾವ್ ರವರು ಹೇಳಿದರು.

ಪಟ್ಟಣದ ಹೊಸಪೇಟೆ ಬೈಪಾಸ್ ರಸ್ತೆಯಲ್ಲಿರುವ ಶಾಸಕರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಕಂಪ್ಲಿ ಯುವನಾಯಕ ಅಕ್ಕಿಜಿಲಾನ್ ಭಾಗವಹಿಸಿ ಮಾತನಾಡಿ,ಉದಾರೀಕರಣ, ಆರ್ಥಿಕ ಸ್ವಾವಲಂಬನೆ ಸೇರಿ ನಾನಾ ಕ್ಷೇತ್ರಗಳಲ್ಲಿ ತಜ್ಞರಾಗಿ ಉತ್ತಮ ಸೇವೆ ಸಲ್ಲಿಸಿದ ಮನಮೋಹನ ಸಿಂಗ್ ಅವರು ಅರ್ಥಿಕ ಮಂತ್ರಿಯಾಗಿ, ದೇಶದ ಪ್ರಧಾನಿಯಾಗಿ ಕೊಡುಗೆಗಳನ್ನು ನೀಡಿದ್ದಾರೆ ಎಂದು ಸ್ಮರಿಸಲಾಯಿತು.

ಈ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಎಂ.ಸುಧೀರ್   ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಾಲ್ಮೀಕಿ ರಘುನಾಯಕ ಪುರಸಭೆ ಸದಸ್ಯರಾದ ಲಡ್ಡು ಹೊನ್ನುರವಲಿ,ಗ್ರಾಮ ಪಂಚಾಯಿತಿ ಸದಸ್ಯ ಹೆಚ್.ಕುಮಾರಸ್ವಾಮಿ,ಯೂತ್ ಕಾಂಗ್ರೇಸ್ ಅಧ್ಯಕ್ಷ ಆರ್.ಪಿ.ಶಶಿಕುಮಾರ ನಗರ ಘಟಕ ಅಧ್ತಕ್ಷ ಸೈಯದ ಉಸ್ಮಾನ್ ಮುಖಂಡರಾದ ಮೌಲಾಸಾಬ್,ಗೋಪಾಲ,ಸತ್ಯಪ್ಪ,ಸುಧಾಕರ,ಹರಿಜನ ಜಗದೀಶ ಯುವಮುಖಂಡರಾದ ರಾಜಭಕ್ಷಿ,ವೆಂಕಟೇಶ, ರಾಮಚಂದ್ರ,ರುದ್ರಮುನಿ, ಸೇರಿದಂತೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು.

Contact For News&Ads

Siddi TV
Previous Post Next Post

Contact Form

f="https://unpkg.com/video.js/dist/video-js.css" rel="stylesheet">