ಭಕ್ತಿಯಿಂದ ಜರುಗಿದ ಕಳಸಧಾರಣ ಕಾರ್ಯಕ್ರಮ
ಕಂಪ್ಲಿಯ ಆರಾಧ್ಯದೈವ ಶ್ರೀ ಬಸವೇಶ್ವರ ಹಾಗೂ ನೀಲಮ್ಮ ತಾಯಿನವರ ಜೋಡಿ ಮಹಾ ರಥೋತ್ಸವ ಪ್ರಯುಕ್ತ ಇಂದು ಕಳಸಧಾರಣ ಕಾರ್ಯಕ್ರಮವು ಭಕ್ತಿಯಿಂದ ಜರುಗಿತು.
ಮಹಾ ರಥೋತ್ಸವ ಕಾರ್ಯಕ್ರಮವು ಬದಲಾದ ಸಮಯ ಸಂಜೆ 4 ಗಂಟೆಯಿಂದ 4:30 ಗಂಟೆಗೆ ನಡೆಯಲಿದ್ದು, ಹಾಗೂ ತೇರಿಗೆ ಬಾಳೇ ಹಣ್ಣು ಬದಲಿಗೆ ತುತ್ತತ್ತಿಯನ್ನ ಅರ್ಪಿಸಬೇಕು.
ಭಕ್ತಾಧಿಗಳು ಸಹಕಾರಿಸಬೇಕೆಂದು ದೇವಸ್ಥಾನದ ಕಾರ್ಯಕಾರಿ ಮಂಡಳಿಯ ಧರ್ಮಕರ್ತರಾದ ಯು.ಎಂ. ವಿದ್ಯಾಶಂಕರ ರವರು ತಿಳಿಸಿದರು.
ಇನ್ನು ಈ ಕಾರ್ಯಕ್ರಮದಲ್ಲಿ ಶ್ರೀ ಪೇಟೆ ಬಸವೇಶ್ವರ ದೇವಸ್ಥಾನ ಕಾರ್ಯಕಾರಿ ಮಂಡಳಿಯ ಅಧ್ಯಕ್ಷ ಡಿ.ವೀರಪ್ಪ, ಕಾರ್ಯದರ್ಶಿ ಚೌಕೀನ್ ಸತೀಶ ಹಾಗೂ ಎಲ್ಲಾ ಸದಸ್ಯರು,ಪ್ರಧಾನ ಅರ್ಚಕರಾದ ಸಿದ್ದರಾಮೇಶ್ವರ ಶಾಸ್ತ್ರೀ ಮತ್ತು ಚಂದ್ರಶೇಖರಯ್ಯ ಸ್ವಾಮಿ ಹಾಗೂ ಭಕ್ತಾಧಿಗಳು ಪಾಲ್ಗೊಂಡಿದ್ದರು.
Tags
ಟಾಪ್ ನ್ಯೂಸ್