ಕಂಪ್ಲಿ ಸಕ್ಕರೆ ಕಾರ್ಖಾನೆ ಪುನಃ ಸ್ಥಾಪನೆಗೆ ಒತ್ತಾಯ
ಕಂಪ್ಲಿಯ ಸಕ್ಕರೆ ಕಾರ್ಖಾನೆಯನ್ನು ಪುನಃ ಸ್ಥಾಪಿಸಲು ಆಗ್ರಹಿಸಿ ಅಖಿಲ ಕರ್ನಾಟಕ ರಾಜ್ಯ ಕಿಸಾನ್ ಜಾಗೃತಿ ಸಂಘದ ವತಿಯಿಂದ ಇಂದು ಕಂಪ್ಲಿಯ ಉದ್ಭವ ಗಣಪತಿ ದೇವಸ್ಥಾನದಿಂದ ಅಂಬೇಡ್ಕರ್ ಸರ್ಕಲ್ ವರೆಗೂ ಪಾದಯಾತ್ರೆ ಮಾಡುವ ಮೂಲಕ ತಹಶಿಲ್ದಾರರಿಗೆ ಮನವಿ ಸಲ್ಲಿಸಿರು.
ಜಗತ್ ಪ್ರಸಿದ್ಧ ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಕಾರಣಭೂತವಾದ ಐತಿಹಾಸಿಕ ಹಿನ್ನಲೆಯ ಕಂಪ್ಲಿ ಪಟ್ಟಣದಲ್ಲಿ ಈ ಹಿಂದೆ ಸಹಕಾರಿ ಸಕ್ಕರೆ ಕಾರ್ಖಾನೆ ಇದ್ದು. ಸಾವಿರಾರು ಜನರಿಗೆ ಜೀವನಾಡಿಯಾಗಿತ್ತು. ನಾನಾ ಷಡ್ಯಂತ್ರಗಳಿಂದಾಗಿ ಸಕ್ಕರೆ ಕಾರ್ಖಾನೆ ನಶಿಸಿ ಹೋಗಿದು ದುರಂತ ಇತಿಹಾಸವಾಗಿರುತ್ತವೆ. ಇದೀಗ ಕಂಪ್ಲಿ ತಾಲೂಕು ಕೇಂದ್ರವಾಗಿ ಹೊರಹೋಮ್ಮಿದ ದಿನೇ ದಿನೇ ಬೆಳೆಯುವ ಪಟ್ಟಣವಾಗಿ ರೋಪಗೊಂಡಿದೇ ವಿದ್ಯಾವಂತ ಮತ್ತು ಕೌಶಲ್ಯದಾರಿತ ಯುವ ಜನತೆಯ ಸಂಖ್ಯೆ ಹೆಚ್ಚಿದ ಸಕ್ಕರೆ ಕಾರ್ಖಾನೆ ಸ್ಥಾಪಿಸಲು ಪೂರಕವಾದ ಸೂಕ್ತ ವಾತಾವರಣ ಮಾರುಕಟ್ಟೆ ಇದೆ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಸಾಕಷ್ಟು ಭೂಮಿ ಇದೆ ತುಂಗಭದ್ರ ನದಿ ಇದೆ ಕಬ್ಬು ಬೆಳೆಯುವ ಸಹಸ್ರಾವರು ಹೆಕ್ಟರಷ್ಟು ಕೃಷಿ ಭೂಮಿ ಇದೆ ಹಾಗಾಗಿ ಸಕ್ಕರೆ ಕಾರ್ಖಾನೆಯೂ ಸಹಕಾರಿ ಅಥವಾ ಸರ್ಕಾರ ಅವರ ವಲಯದಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆ ಆಗಬೇಕು ಯಾವುದೇ ಕಾರಣಕ್ಕೂ ಖಾಸಗಿ ವಲಯದಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆಯಾಗಲು ನಾವು ಒಪ್ಪುವುದಿಲ್ಲ ಭೂಮಿಯು ರೈತರ ಸಂಪತ್ತು ಆದ ಕಾರಣವಾಗಿ ಸರ್ಕಾರ ವಲಯ ಅಥವಾ ಸಹಕಾರ ವಲಯದಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು. ಹಾಗೆ 2023 ನೇ ಸಾಲಿನ ವಿಧಾನಸಭಾ ಚುನಾವಣೆ ಸಮಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಚಾರ ಭಾಷಣಕ್ಕಾಗಿ ಕುರುಗೋಡಿಗೆ ಬಂದಾಗ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಕಂಪ್ಲಿ ಸಕ್ಕರೆ ಕಾರ್ಖಾನ ಜಮೀನನ್ನು ಸರ್ಕಾರ ಮರು ತೆಗೆದುಕೊಂಡು ಸಕ್ಕರೆ ಕಾರ್ಖಾನೆ ಪುನಃ ಸ್ಥಾಪಿಸುತ್ತೇವೆಂದು ಮಾತು ಕೊಟ್ಟಿರುತ್ತಾರೆ ಸರ್ಕಾರ ಅಧಿಕಾರಕ್ಕೆ ಬಂದು ಒಂದುವರೆ ವರ್ಷ ಆಗಿರುತ್ತದೆ ಆದರೆ ಕಂಪ್ಲಿ ಸಕ್ಕರೆ ಕಾರ್ಖಾನೆ ಬಗ್ಗೆ ಯಾವುದೇ ರೀತಿ ಚಕಾರ ಎತ್ತುತ್ತಿಲ್ಲ ಕೂಡಲೇ ಕ್ರಮ ಕೈಗೊಂಡು ಸರ್ಕಾರ ಅಥವಾ ಸಹಕಾರಿ ವಲಯದಲ್ಲಿ ಕಾರ್ಖಾನೆ ಸ್ಥಾಪಿಸಿ ನಿಮ್ಮ ಮಾತನ್ನು ಉಳಿಸಿಕೊಳ್ಳಬೇಕು ಈ ಭಾಗದಲ್ಲಿ ನೀರಿನ ಸವಲತ್ತು ಬಹಳ ಇದೆ ಭತ್ತ ಬಾಳೆ ಹಾಗೂ ಮೆಣಸು ಬೆಳೆ ಆರ್ಥಿಕ ನಷ್ಟಕ್ಕೆ ಕೀಡಾಗಿ ಭೂಮಿ ಬಂಜಾರ ವಾಗುವ ಆಪತ್ತಿನಲ್ಲಿ ರೈತರಿದ್ದು ಕಬ್ಬು ಬೆಳೆಯಲು ರೈತರು ಉತ್ಸಾಹರಾಗಿದ್ದಾರೆ ಕಬ್ಬು ಬೆಳೆಯುವುದರಿಂದ ಈ ಭಾಗದ ಮಣ್ಣಿನ ಫಲವತ್ತತೆಯನ್ನು ಕಾಪಾಡಬಹುದು ಕಂಪ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆ ಯಾದಲ್ಲಿ ವ್ಯಾಪಾರ ಹಾಗೂ ವಾಣಿಜ್ಯಕ್ಕೂ ಬಹಳ ಅನುಕೂಲವಾಗುತ್ತದೆ ಗಂಗಾವತಿ ಹಾಗೂ ದರೋಜಿ ವಲಯ ಕಂಪ್ಲಿ ಮಾರ್ಗವಾಗಿ ರೈಲು ನಿರ್ಮಾಣಕ್ಕೂ ಈಗಾಗಲೇ ಸಮಿಸ್ಟೇ ಆಗಿದ ಸಕ್ಕರೆ ಕಾರ್ಖಾನೆಗೆ ರೈಲು ಮಾರ್ಗವು ಬಹಳಷ್ಟು ಅನುಕೂಲವಾಗುತ್ತದೆ ವ್ಯಾಪಾರ ವ್ಯವಹಾರ ಹೆಚ್ಚುತ್ತದೆ.
ಈಗಾಗಲೇ ಪರಿಸರ ಇಲಾಖೆಯ ಸಾರ್ವಜನಿಕರ ಸಭೆ ನಡೆಸಿ ಇಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಅಗತ್ಯವಿದೆಯೆಂದು ತೀರ್ಮಾನ ಮಾಡಿ ಪರಿಸರ ಇಲಾಖೆಯಿಂದ ಅನುಮತಿ ದೊರಕಿದೆ ಅಲ್ಲದೆ ಸಕ್ಕರೆ ಕಾರ್ಖಾನೆಗೆ ನೀರನ್ನು ಕೊಡುವುದಕ್ಕೆ ನೀರಾವರಿ ಇಲಾಖೆ ಹಾಗೂ ಸಂಬಂಧಿಸಿದಂತ ಅಧಿಕಾರಿಗಳು ಅನುಮತಿ ಕೊಟ್ಟಿರುತ್ತಾರೆ. ಈ ಎಲ್ಲಾ ಸಂಪನ್ಮೂಲಗಳನ್ನು ಬಳಸಿಕೊಂಡು ಇದ್ದ ಜಾಗದಲ್ಲಿ ಕಂಪ್ಲಿ ಸಕ್ಕರೆ ಕಾರ್ಖಾನೆಯನ್ನು ಸ್ಥಾಪಿಸಬೇಕೆಂದು ಅಖಿಲ ಕರ್ನಾಟಕ ರಾಜ್ಯ ಕಿಸಾನ್ ಜಾಗೃತಿ ಸಂಘದ ವತಿಯಿಂದ ತಮ್ಮಲ್ಲಿ ಕಳಕಳಿಯಿಂದ ವಿನಂತಿಸಿಕೊಳ್ಳುತ್ತಿದ್ದೇವೆ. ಕೂಡಲೇ ಕ್ರಮ ಕೈಗೊಳ್ಳದಿದ್ದಲ್ಲಿ ಮುಂದೆ ಬರುವ ಸಮಯದಲ್ಲಿ ಕಂಪ್ಲಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗುತ್ತದೆ.
ಇನ್ನು ಈ ಸಂದರ್ಭದಲ್ಲಿ ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷೇ ವಿ.ಉಶಾ ದೇವೆಂದ್ರ, ಬಳ್ಳಾರಿ ಜಿಲ್ಲಾಧ್ಯಕ್ಷ ಬಿ.ಗಂಗಾಧರ, ಕಂಪ್ಲಿ ತಾಲೂಕ ಅಧ್ಯಕ್ಷ ಗುಬಾಜಿ ರಾಮಾಂಜಿನಿ, ಹನುಮಂತಪ್ಪ, ಗಾದಿಲಿಂಗಪ್ಪ, ಲಕ್ಷ್ಮಿ ರೆಡ್ಡಿ, ಮುಸ್ತಾಫ್, ಹರ್ಷಿತ್ ಹಾಗೂ ರೈತರು ಭಾಗಿಯಾಗಿದ್ದರು.