Ballari : ಪ್ರೇಯಸಿ ಸೇರಿ ಕುಟುಂಬದ ಮೂವರ ಮೇಲೆ ಪ್ರೇಮಿ ಮಚ್ಚಿನಿಂದ ಹಲ್ಲೆ


ಯುವತಿ ಕೀರ್ತಿ ಮತ್ತು ಆರೋಪಿ ನವೀನ್ ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು..

ಬಾಳೆಹಣ್ಣು ವ್ಯಾಪಾರ ಮಾಡ್ತಿದ್ದ ನವೀನ್ ಮತ್ತು ಕೀರ್ತಿ ಕಾಲೇಜು ಓದುವಾಗಲೇ ಪ್ರೇಮಾಂಕುರವಾಗಿತ್ತು..

ಎಂಸಿಎ ಓದುವ ಹಿನ್ನೆಲೆ ಪ್ರೀತಿ ಪ್ರೇಮಕ್ಕೆ ಬ್ರೇಕ್ ಹಾಕೋದಾಗಿ ಹೇಳಿದ್ದ ಕೀರ್ತಿ..

ಇದರಿಂದ ಅಸಮಾಧಾನಗೊಂಡಿದ್ದ ಭಗ್ನ ಪ್ರೇಮಿಯಿಂದ ಹಲ್ಲೆ ಮಾಡಿದ್ದಾನೆ..

ಪಾಪಿನಾಯಕನ ಹಳ್ಳಿ ಮೂಲದ ನವೀನ್ ನಿನ್ನೆ ಸಂಜೆ ಸಂಡೂರಿಗೆ ಬಂದು ಕೀರ್ತಿ ಮನೆಯ ಮುಂದೆ ಗಲಾಟೆ ಮಾಡಿದ್ದಾನೆ..

ಈ ವೇಳೆ ಗಲಾಟೆ ನಡೆದು ಕೀರ್ತಿ ಮತ್ತವರ ತಾಯಿ ಕಮಾಲಕ್ಷಿ ಮೇಲೆ ಹಲ್ಲೆ ಮಾಡಿದ್ದಾನೆ.

ಬಿಡಿಸಲು ಬಂದ ಕೀರ್ತಿ ಸಹೋದರ ಕೀರ್ತಿ ಸಹೋಸರ ಕಾರ್ತಿಕ್ ಮೇಲೆ ಮಚ್ಚು ಬೀಸಿದ್ದಾನೆ..

ಗಲಾಟೆ ಜೋರಾಗುತ್ರಿದ್ದಂತೆ ಓಡಿ ಹೋಗಿದ್ದಾನೆ.. ಬಳಿಕ ಇವತ್ತು ಬೆಳಿಗ್ಗೆ ಶವವಾಗಿ ಪತ್ತೆಯಾಗಿದ್ದಾನೆ.

ಭಗ್ನ ಪ್ರೇಮಿಯಿಂದ ಯುವತಿ ಮತ್ತವರ ಮನೆಯವರ ಮೇಲೆ ಹಲ್ಲೆ..

ಹಲ್ಲೆ‌ ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡ ಭಗ್ನ ಪ್ರೇಮಿ

ಸಂಡೂರಿನ ಚರ್ಚ್ ಶಾಲೆ ರಸ್ತೆಯಲ್ಲಿ ಘಟನೆ..

ಪ್ರೇಯಸಿ ಸೇರಿ ಕುಟುಂಬದ ಮೂವರ ಮೇಲೆ  ಪ್ರೇಮಿ ಮಚ್ಚಿನಿಂದ ಹಲ್ಲೆ..

ಯುವತಿ ಮತ್ತವರ ತಾಯಿಗೆ ಸಣ್ಣ ಪುಟ್ಟ ಗಾಯ ಯುವತಿ ಅಣ್ಣನಿಗೆ ಬಲವಾಗಿ ಬಿದ್ದ ಮಚ್ಚಿನೇಟು..

ಹೊಸಪೇಟೆ ತಾಲೂಕಿನ ಪಿ.ಕೆ.ಹಳ್ಳಿ ಮೂಲದ ನವೀನಕುಮಾರ್‌ ಹಲ್ಲೆ ಮಾಡಿದ ಆರೋಪಿ. 

ಮೂವರನ್ನೂ ಹೆಚ್ಚಿನ ಚಿಕಿತ್ಸೆಗಾಗಿ ತೋರಣಗಲ್ಲು ಜಿಂದಾಲ್ ಸಂಜೀವಿನಿ ಆಸ್ಪತ್ರೆಗೆ ದಾಖಲು

ಘಟನೆ ಬಳಿಕ ಯಶವಂತನಗರದ ಗಂಡಿ ಮಲಿಯಮ್ಮ ದೇಗುಲದ ಬಳಿ ಕಾರು ಬಿಟ್ಟು ಹೋಗಿದ್ದ ಆರೋಪಿ

ಕಾರನ್ನು ವಶಕ್ಕೆ ಪಡೆದ ಪೊಲೀಸರು, ಆರೋಪಿಯ ಪತ್ತೆಗೆ ಜಾಲ ಬೀಸಿದ್ದರು..

ಆದರೆ ಬೆಳಿಗಿನ ಜಾವ ಆರೋಪಿ ಯಶವಂತ ನಗರ ಬಳಿಯ ರೈಲ್ವೆ ಹಳಿಗೆ ತಲೆ ಕೊಟ್ಟು ಸಾವನ್ನಪ್ಪಿದ್ದಾನೆ.

ಸಂಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">