ಬಿಜೆಪಿಯ 3 ಸದಸ್ಯರು ಉಚ್ಚಾಟನೆ
ಕ್ಷೇತ್ರ ರಾಜಕೀಯದಲ್ಲಿ ತೀವ್ರ ಕುತೂಹಲ ಕೇರಳಿಸಿದ್ದ ಕಂಪ್ಲಿ ಪುರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆಯಾಗಿದ್ದು, ಚುನಾವಣೆಯಲ್ಲಿ ಈ ಬಾರಿ ಪುರಸಭೆಯ ಗದ್ದುಗೆ ಕಾಂಗ್ರೆಸ್ ನ ಕೈವಶವಾಗಿದೆ.
23 ಸದಸ್ಯರಲ್ಲಿ 13 ಸದಸ್ಯರ ಬಲವುಳ್ಳ ಬಿಜೆಪಿ, 10 ಸದಸ್ಯರ ಬಲವುಳ್ಳ ಕಾಂಗ್ರೆಸ್ ನಡುವೆ ಪೈಪೋಟಿ ನಡೆದಿದ್ದು, ಚುನಾವಣೆಯಲ್ಲಿ ಬಿಜೆಪಿಯ 3 ಸದಸ್ಯರು ಗೈರಾಗಿದ್ದಾರೆ, ಇನ್ನು ಕಾಂಗ್ರೆಸ್ ನ 10 ಸದಸ್ಯರೊಂದಿಗೆ ಕಂಪ್ಲಿ ಶಾಸಕ ಹಾಗೂ ಬಳ್ಳಾರಿ ಸಂಸದರ ಮತ ಸೇರಿ ಒಟ್ಟು 12 ಮತಗಳು ಕಾಂಗ್ರೆಸ್ ಗೆ ಬಂದಿದ್ದು ಪುರಸಭೆಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ.
ಬಿಜೆಪಿಯ 3 ಸದಸ್ಯೆಯರು ಚುನಾವಣೆಗೆ ಗೈರು : ಉಚ್ಚಾಟನೆ
ಮೂರು ಸದಸ್ಯರು ಪಕ್ಷದ್ರೋಹ ಮಾಡಿದ್ದಾರೆ ಹಾಗಾಗಿ ಅವರಿಗೆ ಕಾನೂನು ಕ್ರಮ ಜರುಗಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುತ್ತೇವೆ ಹಾಗೂ ಜನ ಆಶೀರ್ವಾದ ನಮ್ಮ ಪಕ್ಷದ ಮೇಲೆ ಇತ್ತು ಆದರೆ ಕಾಂಗ್ರೆಸ್ ಸರ್ಕಾರ ಮತ್ತು ಶಾಸಕರು, ಸಂಸದರು ಸೇರಿ ವಾಮ ಮಾರ್ಗದಿಂದ ಇವರನ್ನು ದುಡ್ಡಿನ ಆಮಿಷ ಕೊಟ್ಟು, ಈ ದಿನ ಗೈರುಗೊಳಿಸಿದ್ದಾರೆ ಇದು ಕುತಂತ್ರ ಹಾಗೂ ರಾಜಕೀಯ ಷಡ್ಯಂತರ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಪುರಸಭಾ ಸದಸ್ಯರಾದ, ಸುದರ್ಶನ್ ರೆಡ್ಡಿ ರಾಮಾಂಜಿನಲು, ಡಾಕ್ಟರ್ ವಿ ಎಲ್ ಬಾಬು, ನಾಗರಾಜ್ ಸ್ವಾಮಿ ಹಾಗೂ ಪುರಸಭೆ ಸದಸ್ಯರು ಉಪಸ್ಥಿತರಿದ್ದರು.