ನಿಜ ಶರಣ ಅಂಬಿಗರ ಚೌಡಯ್ಯ 904ನೇ ಜಯಂತಿ
ಕಂಪ್ಲಿ : ಇಲ್ಲಿನ ಕೋಟೆಯ ಶ್ರೀ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮ ಮಂಗಳವಾರ ನಡೆಯಿತು.ಅಂಬಿಗರ ಚೌಡಯ್ಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.
ನಂತರ ನಿಜ ಶರಣ ಅಂಬಿಗರ ಚೌಡಯ್ಯನವರು ನೇರ ನುಡಿಯವರಾಗಿದ್ದರು. ಹೀಗಾಗಿಯೇ ಅವರಿಗೆ ನಿಜ ಶರಣ ಅಂತಾ ಬಿರುದು ಬಂದಿದೆ ಎಂದು ಶಾಲಾ ಮುಖ್ಯಗುರು ಬಡಿಗೇರ ಜಿಲಾನಸಾಬ್ ಹೇಳಿದರು. ಅಂಬಿಗರ ಚೌಡಯ್ಯ ಬಸವಣ್ಣನವರ ಬೆನ್ನುಲುಬಾಗಿದ್ದರು. ಇಂತಹ ಮಹಾನೀಯ ನಿಜ ಶರಣರ ವಚನಗಳು, ತತ್ವಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು 12ನೇ ಶತಮಾನದ ಅನೇಕ ಶರಣರು ತಮ್ಮ ವಚನಗಳ ಮೂಲಕ ಸಮಾಜ ತಿದ್ದುವ ಕೆಲಸ ಮಾಡಿದ್ದಾರೆ. ಈ ಎಲ್ಲಾ ಶರಣರ ವಚನಗಳಲ್ಲಿ ನೇರವಾಗಿ, ದಿಟ್ಟವಾಗಿ ವಚನಗಳ ಮೂಲಕವೇ ಉತ್ತರಿಸುವ ಸರಳರಲ್ಲಿ ಅತಿ ಸರಳರು ನಿಜ ಶರಣ ಅಂಬಿಗರ ಚೌಡಯ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಲಾ ಶಿಕ್ಷಕಿಯರಾದ ಕೆ. ಶ್ವೇತಾ ಎಂ. ವರ್ಷಾ ಕೋಲ್ಕರ ಉಮಾ ಮುಸ್ಕಾನ ಸುನಿತಾ ಮಣ್ಣೂರ ಲಕ್ಷ್ಮಿ ಜೆ ಅಕ್ಷತಾ ಗೌಸಿಯ ಸೇರಿದಂತೆ ಪಾಲಕ ಪೋಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.