Kampli : ಸಾವಿತ್ರಿಬಾಯಿ ಫುಲೆ ಜಯಂತಿ ಆಚರಣೆ


ಸಾವಿತ್ರಿಬಾಯಿ ಫುಲೆ ಜಯಂತಿ ಆಚರಣೆ

 ಕಂಪ್ಲಿ : ನಗರದ ಕೋಟೆಯ ಶ್ರೀ ಸ್ವಾಮಿ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆವರಣದಲ್ಲಿ ಬುಧುವಾರ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಅವರ 195ನೇ ಜಯಂತಿ ಆಚರಿಸಲಾಯಿತು.

ಮುಖ್ಯಗುರುಗಳಾದ ಬಡಿಗೇರ್ ಜಿಲಾನಸಾಬ್ ಮಾತನಾಡಿ,‘ಸಾವಿತ್ರಿಬಾಯಿ ಫುಲೆ ಅವರು ಸ್ವಾತಂತ್ರ್ಯ ಪೂರ್ವದಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ದುಡಿದರು. ಅನೇಕ ಕಷ್ಟ ಅವಮಾನಗಳನ್ನು ಸಹಿಸಿದರು ಆದರೂ ಅವರು ಶಿಕ್ಷಣ ನೀಡಿ ಮಾತೆಯಾದರು. ಆಗಿನ ಕಾಲದ ಸಾಮಾಜಿಕ, ಸಮಾನತೆ, ದೀನ ದಲಿತರ, ಹಿಂದುಳಿದವರ ಶೈಕ್ಷಣಿಕ ಅಭಿವೃದ್ಧಿಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಸಮಾಜದ ಅಂಕುಡೊಂಕುಗಳನ್ನು ತಿದ್ದಿ ಸುಧಾರಣೆ ತಂದ ಮಹಾತ್ಮರಲ್ಲಿ ಸಾವಿತ್ರಿಬಾಯಿ ಫುಲೆಯವರು ಅಗ್ರಗಣ್ಯರು. ಮಹಿಳೆಯರ ಶಿಕ್ಷಣಕ್ಕೆ ರಹದಾರಿ ಮಾಡುವ ಕಾಯಕಕ್ಕೆ ತಮ್ಮನ್ನು ತಾವು ಅರ್ಪಣೆ ಮಾಡಿಕೊಂಡಿದ್ದ ತಾಯಿಗೆ ಮನದಾಳದ ನಮನಗಳು. ಅವರ ಕಾಯಕಕ್ಕೆ ನೆರವು ನೀಡಿದ ಸಮಾಜಮುಖಿ ಚಿಂತನೆಯ ಅವರ ಪತಿ ಜ್ಯೋತಿಬಾ ಫುಲೆ ಕೂಡ ಸ್ಮರಣೀಯರು. ಅವರ ಆದರ್ಶ ಸರಳ ಜೀವನವು ಎಲ್ಲರಿಗೂ ಮಾದರಿ ಎಂದರು.

ಈ ಸಂದರ್ಭದಲ್ಲಿ ಶಾಲಾ ಸಹ ಶಿಕ್ಷಕಿಯರಾದ ಕೋಲ್ಕರ್ ಉಮಾ ವರ್ಷಾ ಮಂಜುಂದರ ಮಣ್ಣೂರ ಲಕ್ಷ್ಮಿ  ಜೇ ಅಕ್ಷತಾ ಅರ್ ಕೆ ಮುಸ್ಕಾನ ಸುನೀತಾ ಗೌಸಿಯ ಸೇರಿದಂತೆ ಪಾಲಕ ಪೋಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.

Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">