Kampli : ವಿಶೇಷ ಚೇತನರಿಗೆ ಉಚಿತವಾಗಿ ಪರಿಕರಗಳ ವಿತರಣೆ ಕಾರ್ಯಕ್ರಮ


ವಿಶೇಷ ಚೇತನರಿಗೆ ಉಚಿತವಾಗಿ ಪರಿಕರಗಳ ವಿತರಣೆ ಕಾರ್ಯಕ್ರಮ 

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ B C ಟ್ರಸ್ಟ್ ವತಿಯಿಂದ ಪರಮಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಅಧ್ಯಕ್ಷತೆಯಲ್ಲಿ ಕರ್ನಾಟಕ ರಾಜ್ಯದಂತ ಅನುಷ್ಠಾನ ಮಾಡುತ್ತಿರುವ  ಜನ ಮಂಗಲ ಕಾರ್ಯಕ್ರಮದ ಯೋಜನೆ ಅಡಿಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ವಿಶೇಷ ಚೇತನರಿಗೆ ಅನುಕೂಲವಾಗುವಂತೆ ವಿವಿಧ ರೀತಿಯ ಪರಿಕರಗಳನ್ನು ಉಚಿತವಾಗಿ ವಿತರಣೆ ಮಾಡಿಕೊಂಡು ಬರುತ್ತಿದ್ದು ಈ ದಿನ ಕಂಪ್ಲಿ ಪಟ್ಟಣದ ಮಾರುತಿ ನಗರ ವಲಯದ ಶಿಬಿರದಿನ್ನಿ ಏರಿಯಾದಲ್ಲಿ   ಒಂದು ತಿಂಗಳ ಮುಂಚಿತವಾಗಿ ಬಡೇಶಾಖಾದ್ರಿ ಸ್ವ ಸಹಾಯ  ತಂಡದ ಸದಸ್ಯರಾದ ಸೀಮಾ ಅವರ ಮಗನಾದ ಫಿರೋಜ್ ಅವರು ಹುಟ್ಟಿನಿಂದಲೇ ವಿಶೇಷ ಚೇತನಾಗಿರುವುದರಿಂದ ಇವರನ್ನು ಗುರುತಿಸಿ ಮನವಿ ನೀಡಲು ತಿಳಿಸಲಾಗಿತ್ತು.

ಸದ್ರಿ ಸದಸ್ಯರು ಇವರಿಗೆ ಅನುಕೂಲವಾಗುವಂತೆ ವಿಲ್ ಚರ್ ಬೇಡಿಕೆಗೆ ಮನವಿ ನೀಡಿದ್ದು ಇದನ್ನು ಕ್ಷೇತ್ರಕ್ಕೆ ಪೂಜ್ಯರ ಮಂಜೂರಾತಿಗೆ ಕಳುಹಿಸಿಕೊಟ್ಟಿದ್ದು ಪೂಜ್ಯರು ಮಂಜೂರಾತಿ ನೀಡಲಾಗಿದ್ದು ಮಂಜೂರಾತಿ ಗೊಂಡಿರುವ ವಿಲ್ ಚೇರ್ ನ್ನು ಇಂದು ಬಳ್ಳಾರಿ ಜಿಲ್ಲೆಯ ಗೌರವಾನ್ವಿತ ನಿರ್ದೇಶಕರಾದ ಶ್ರೀಯುತ ರೋಹಿತಾಕ್ಷ ಅವರು ಫಲಾನುಭವಿಯ ಮನೆ ಭೇಟಿ ಮಾಡಿ ವೀಲ್ ಚೇರ್ ವಿತರಣೆ ಮಾಡಿ ಕುಟುಂಬದ ಸದಸ್ಯರಿಗೆ  ಸಾಂತ್ವಾನ ಹೇಳಿದರು.

ಈ ಪರಿಕರ ವಿತರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರು ಹಾಗೂ ಕಂಪ್ಲಿ ಪುರಸಭೆ ಸದಸ್ಯರಾದ ರಾಮಾಂಜನೇಯ, ತಾಲೂಕು ರೈತ ಸಂಘಟನೆಯ ಗೌರವಾಧ್ಯಕ್ಷರಾದ T ಗಂಗಪ್ಪ, ಒಕ್ಕೂಟದ ಅಧ್ಯಕ್ಷರಾದ ಈರಮ್ಮ,ಉಪಾಧ್ಯಕ್ಷರಾದ ನಾಗರಾಜ,ಹಾಗೂ ತಾಲೂಕಿನ ಯೋಜನಾಧಿಕಾರಿಗಳಾದ ಹಾಲಪ್ಪ M,ವಲಯದ ಮೇಲ್ವಿಚಾರಕರಾದ ಮಂಜುಳಾ, ಸೇವಾ ಪ್ರತಿನಿಧಿಗಳಾದ  ರಮೇಶ್ ಹಾಗೂ ಸ್ವಸಹಾಯ ಸಂಘದ ಸದಸ್ಯರ ಉಪಸ್ಥಿತಿಯಲ್ಲಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಯಿತು.

Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">