Budget : ಈ ಬಾರಿಯೂ ಜನಗಣತಿ ಅನುಮಾನ: ಬಜೆಟ್‌ನಲ್ಲಿ ಕೇವಲ ₹574 ಕೋಟಿ ಮೀಸಲು


Budget : ಈ ಬಾರಿಯೂ ಜನಗಣತಿ ಅನುಮಾನ: ಬಜೆಟ್‌ನಲ್ಲಿ ಕೇವಲ ₹574 ಕೋಟಿ ಮೀಸಲು

2025-26ನೇ ಸಾಲಿನ ಬಜೆಟ್‌ನಲ್ಲಿ ಗಣತಿಗೆ ಕೇವಲ ₹574.80 ಕೋಟಿ ಮೀಸಲಿಡಲಾಗಿದ್ದು, ಈ ವರ್ಷವೂ ದೇಶದಲ್ಲಿ ಜನಗಣತಿ ನಡೆಯುವುದು ಅನುಮಾನವಾಗಿದೆ.

2019 ಡಿಸೆಂಬರ್ 23ರಲ್ಲಿ ಕೇಂದ್ರ ಸಂಪುಟ ಸಭೆಯು 2021ರ ಜನಗಣತಿಯನ್ನು ₹8,754.23 ಕೋಟಿ ವೆಚ್ಚದಲ್ಲಿ ನಡೆಸಲು ಮತ್ತು ₹3,941.35 ಕೋಟಿ ವೆಚ್ಚದಲ್ಲಿ ರಾಷ್ಟ್ರೀಯ ಜನಸಂಖ್ಯಾ ನೋಂದಣಿಯನ್ನು (ಎನ್‌ಪಿಆರ್) ಪರಿಷ್ಕರಿಸುವ ಪ್ರಸ್ತಾವನೆಗೆ ಅನುಮೋದನೆ ನೀಡಿತ್ತು. ಕೋವಿಡ್ ಪಿಡುಗಿನ ಕಾರಣಕ್ಕೆ 2021ರಲ್ಲಿ ಗಣತಿ ನಡೆದಿರಲಿಲ್ಲ.

ಶನಿವಾರ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ 2025-26ನೇ ಸಾಲಿನ ಬಜೆಟ್‌ನಲ್ಲಿ ಜನಗಣತಿ, ಸಮೀಕ್ಷೆ ಮತ್ತು ಆರ್‌ಜಿಐಗೆ ಕೇವಲ ₹574.80 ಕೋಟಿ ಮೀಸಲಿಡಲಾಗಿದೆ. ಕಳೆದ ವರ್ಷ ₹572 ಕೋಟಿ ಮೀಸಲಿಡಲಾಗಿತ್ತು.

ಜನಗಣತಿ ಮತ್ತು ಎನ್‌ಪಿಆರ್‌ ಸಂಪೂರ್ಣ ಪ್ರಕ್ರಿಯೆಗೆ ಸುಮಾರ 3 ₹12 ಸಾವಿರ ಕೋಟಿ ವೆಚ್ಚವಾಗುತ್ತದೆ ಎಂದು ಅಂದಾಜಿಸಲಾಗಿದೆ. 2021-22ನೇ ಸಾಲಿನ ಬಜೆಟ್ ಇದಕ್ಕಾಗಿ ₹3,768 ಕೋಟಿ ಮೀಸಲಿಡಲಾಗಿತ್ತು. ಆದರೆ ಬಾರಿಯ ಅನುದಾನ ಗಮನಿಸಿದರೆ ಗಣತಿ ನಡೆಯುವುದು ಅನುಮಾನವಾಗಿದೆ.

ಜನಗಣತಿಯನ್ನು 10 ವರ್ಷಗಳಿಗೊಮ್ಮೆ ನಡೆಸಲಾಗುತ್ತದೆ.
Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">