ಸಾಮಾಜಿಕ ಸೇವೆಯಲ್ಲಿ ನಿಸ್ವಾರ್ಥ ಸೇವೆ: ಸಂತೋಷ್ ಎಲ್. ಸೋಮಪ್ಪ "ಕಾಯಕ ಕಣ್ಮಣಿ ವೀರ " ಪ್ರಶಸ್ತಿಗೆ ಭಾಜನ
ಕಂಪ್ಲಿ : ಗಂಗಾವತಿಯ ಶ್ರೀಮತಿ ತುಳಸಿಬಾಯಿ ಥಾವರ್ಯನಾಯ್ಕ ಎಜ್ಯುಕೇಷನ್ ಟ್ರಸ್ಟ್ (ರಿ) ವತಿಯಿಂದ ನೀಡುವ ಪ್ರತಿಷ್ಠಿತ "ಕಾಯಕ ಕಣ್ಮಣಿ ವೀರ" ರಾಜ್ಯ ಪ್ರಶಸ್ತಿಗೆ ಶ್ರೀ ಸಂತೋಷ್ ಎಲ್. ಸೋಮಪ್ಪ ಆಯ್ಕೆಯಾಗಿದ್ದಾರೆ.
ಸಂತೋಷ್ ರವರು ಸಮಾಜ ಸೇವಾ ಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದು, ಅವರ ಪರಿಶ್ರಮ ಹಾಗೂ ಅಮೂಲ್ಯ ಕೊಡುಗೆಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಈ ಪ್ರಶಸ್ತಿ ನೀಡಿ ಸನ್ಮಾನಿಸಲಾಗುತ್ತಿದೆ. ಪ್ರಶಸ್ತಿ ಪ್ರದಾನ ಸಮಾರಂಭವು 2025ರ ಫೆಬ್ರವರಿ 23 ರಂದು ಟ್ರಸ್ಟ್‌ನ 12ನೇ ವಾರ್ಷಿಕೋತ್ಸವದ ಅಂಗವಾಗಿ ಅದ್ದೂರಿಯಾಗಿ ನಡೆಯಲಿದೆ.
Tags
ಟಾಪ್ ನ್ಯೂಸ್