ನಾಳೆ ಕಂಪ್ಲಿ ಜೆಸಿಐ ಸೋನಾದ ಅಧ್ಯಕ್ಷ, ಪದಾಧಿಕಾರಿಗಳು, ಸದಸ್ಯರ ಪದಗ್ರಹಣ ಸಮಾರಂಭ
ಕಂಪ್ಲಿ : ಪಟ್ಟಣದ ವೀರಶೈವ ಭವನದಲ್ಲಿ ಇಂದು(ಮಂಗಳವಾರ) ಸಂಜೆ 6 ಗಂಟೆಗೆ ಜೆಸಿಐ ಕಂಪ್ಲಿ ಸೋನಾದ ವತಿಯಿಂದ ಪದಗ್ರಹಣ ಸಮಾರಂಭ ಹಮ್ಮಿಕೊಂಡಿದೆ.
ಎಚ್.ವೀರಾಪುರ ಗ್ರಾಮದ ಜಡೇಶ ತಾತನವರ ಸಾನ್ನಿಧ್ಯದಲ್ಲಿ ಸೋನಾದ ಅಧ್ಯಕ್ಷ ಸುಹಾಸ್ ಎನ್.ಚಿತ್ರಗಾರ ಇವರಿಂದ ನಿಯೋಜಿತ ಅಧ್ಯಕ್ಷ ಬಿ.ರಸೂಲ್ ಅಧ್ಯಕ್ಷ ಪದವಿ ಸ್ವೀಕರಿಸಲಿದ್ದಾರೆ. ಕಂಪ್ಲಿ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕ ಜೆ.ಎನ್.ಗಣೇಶ್ ಸಮಾರಂಭ ಉದ್ಘಾಟಿಸಲಿದ್ದಾರೆ. ತಹಸೀಲ್ದಾರ್ ಎಸ್.ಶಿವರಾಜ,ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್, ಪಿಐ ಕೆ.ಬಿ.ವಾಸುಕುಮಾರ್, ಮುಖ್ಯಾಧಿಕಾರಿ ಕೆ.ದುರುಗಣ್ಣ, ವೀರಶೈವ ಭವನದ ಅಧ್ಯಕ್ಷ ಎಸ್.ಎಸ್.ಎಂ.ಚನ್ನಯ್ಯಸ್ವಾಮಿ, ಪೂರ್ವ ವಲಯಾಧಿಕಾರಿ ಡಿ.ಜೆ.ಪ್ರದೀಪ್ ಆಗಮಿಸಲಿದ್ದಾರೆ. ವಲಯ 24ರ ಅಧ್ಯಕ್ಷ ಸಿ.ಎ ಕೆ.ವಿ.ಗೌರೀಶ್ ಭಾರ್ಗವ್ ನೂತನ ಅಧ್ಯಕ್ಷರಿಗೆ, ಉಪಾಧ್ಯಕ್ಷ ಟಿ.ಎನ್.ತ್ಯಾಗರಾಜನ್ ನೂತನ ಸದಸ್ಯರಿಗೆ ಪ್ರಮಾಣವಚನ ಬೋಧಿಸಲಿದ್ದಾರೆ ಎಂದು ನಿಯೋಜಿತ ಕಂಪ್ಲಿ ಜೆಸಿಐ ಸೋನಾದ ಅಧ್ಯಕ್ಷ ಬಿ.ರಸೂಲ್ ತಿಳಿಸಿದ್ದಾರೆ.