Kampli : ಜೆಸಿಐ ಕಂಪ್ಲಿ ಸೋನಾ ಕಂಪ್ಲಿ ಘಟಕಕ್ಕೆ ನಿವೇಶನ ಮಂಜೂರು ಮಾಡುವಂತೆ ಪುರಸಭೆಗೆ ಮನವಿ


ಕಂಪ್ಲಿ :ಜೆಸಿಐ ಕಂಪ್ಲಿ ಸೋನಾ ಸಂಸ್ಥೆಯ ಕಂಪ್ಲಿ ಘಟಕಕ್ಕೆ ನಿವೇಶನ ಮಂಜೂರು ಮಾಡಿ ಕೊಡುವಂತೆ ಒತ್ತಾಯಿಸಿ ಜೆಸಿಐ ಕಂಪ್ಲಿ ಸೋನಾದ ಪದಾಧಿಕಾರಿಗಳು ಪುರಸಭೆ ಮುಖ್ಯಾಧಿಕಾರಿ ಕೆ.ದುರುಗಣ್ಣ, ಅಧ್ಯಕ್ಷರಾದ ಭಟ್ಟ ಪ್ರಸಾದ ಅವರಿಗೆ ಶನಿವಾರ ಮನವಿ ಪತ್ರ ಸಲ್ಲಿಸಿದರು. 

ಈ ವೇಳೆ ಜೆಸಿಐ ಕಂಪ್ಲಿ ಸೋನಾ ಘಟಕದ ಅಧ್ಯಕ್ಷರಾದ ಬಿ.ರಸೂಲ್ ಮಾತನಾಡಿ ಜೆಸಿಐ ಸಂಸ್ಥೆಯು ದೇಶದ ಉದ್ದಾಗಲಕ್ಕೂ ಹಲವಾರು ಶೈಕ್ಷಣಿಕ ಸೇವೆ ಹಾಗೂ ಸಾರ್ವಜನಿಕ ವಲಯದಲ್ಲಿ ಸಾಮಾಜಿಕ ಕಳಕಳಿಯುಳ್ಳ ಸೇವೆಗಳನ್ನು ಮಾಡುತ್ತಾ ಬಂದಿರುತ್ತದೆ. ಅದೇ ರೀತಿಯಲ್ಲಿ ಜೆಸಿಐ ಕಂಪ್ಲಿ ಸೋನಾ ಘಟಕವು ಸಹ ತಾಲೂಕಿನಾದ್ಯಂತ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದೆ.  ಹೀಗೆ ಮತ್ತಷ್ಟು ಸಮಾಜಮುಖಿ ಕಾರ್ಯಗಳಲ್ಲಿ ನಾವು ತೊಡಗಿಕೊಳ್ಳಲು ಸ್ಥಳೀಯ ಆಡಳಿತ ಸಹಕಾರವು ಅತ್ಯಗತ್ಯವಾಗಿದ್ದು, ಕಂಪ್ಲಿ ಪುರಸಭೆ ವ್ಯಾಪ್ತಿಯಲ್ಲಿ ಸ್ಥಳೀಯವಾಗಿ ಅವಕಾಶವಿರುವ ಪುರಸಭೆಗೆ ಒಳಪಡುವ ವ್ಯಾಪ್ತಿಯಲ್ಲಿ ಜೆಸಿಐ ಕಂಪ್ಲಿ ಸೋನಾ ಸಂಸ್ಥೆಯ ಕಂಪ್ಲಿ ಘಟಕಕ್ಕೆ ನಿವೇಶನ ಮಂಜೂರು ಮಾಡಿ  ಕೊಡಬೇಕೆಂದು ಮನವಿ ಮಾಡಿಕೊಂಡರು. 

ಈ ಸಂದರ್ಭದಲ್ಲಿ ಜೆಸಿಐ ಕಂಪ್ಲಿ ಸೋನಾ ಘಟಕದ ಪ್ರಮುಖರಾದ ಡಿ.ಮೌನೇಶ್,ರಮೇಶ ಬೆಳಂಕರ ಸಂತೋಷ ಕೊಟ್ರಪ್ಪ ಸೋಗಿ,ಸುಹಾಸ್ ಚಿತ್ರಗಾರ್, ಅಕ್ಕಿಜಿಲಾನ್, ರಮೇಶ್,ಡಿ.ಇಸ್ಮಾಯಿಲ್,ಬಿ.ಹೆಚ್.ಎಂ.ಅಮರನಾಥಶಾಸ್ತ್ರಿ ಸೇರಿ ಅನೇಕರಿದ್ದರು.

Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">