ಕಂಪ್ಲಿ: ನಾಳೆ ವಿದ್ಯುತ್ ವ್ಯತ್ಯಯ
ಕಂಪ್ಲಿ ಜೆಸ್ಕಾಂ ಕಾರ್ಯ ಮತ್ತು ಪಾಲನಾ ಉಪವಿಭಾಗ ವ್ಯಾಪ್ತಿಯ 110/11ಕೆವಿಯ ತುರ್ತು ನಿರ್ವಾಹಣಾ ಕಾರ್ಯ ಕೈಗೊಳ್ಳುತ್ತಿರುವುರಿಂದ ಫೆ.20 ರಂದು ಬೆಳಿಗ್ಗೆ 09 ಗಂಟೆಯಿAದ ಸಂಜೆ 05 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು:
ಕಂಪ್ಲಿ ಪಟ್ಟಣ, ನಂ-10 ಮುದ್ದಾಪುರ, ಕಣಿವೆ ತಿಮ್ಮಾಪುರ, ರಾಮಸಾಗರ, ದೇವಸಮುದ್ರ, ಹಂಪಾದೇವನಳ್ಳಿ, ಜಾಯಿಗನೂರು, ಕುಂಬಾರ್ ಕ್ಯಾಂಪ್, ಕಂಪ್ಲಿ ಕೊಟ್ಟಾಲ್ ಕೃಷನಗರ ಕ್ಯಾಂಪ್ ಸೇರಿದಂತೆ ಇನ್ನೂ ಮುಂತಾದ ಪ್ರದೇಶಗಳು.
ವಿದ್ಯುತ್ ಗ್ರಾಹಕರು ಮತ್ತು ಸಾರ್ವಜನಿಕರು ಸಹಕರಿಸಬೇಕು ಎಂದು ಕಂಪ್ಲಿ ಜೆಸ್ಕಾಂ ಕಾರ್ಯ ಮತ್ತು ಪಾಲನಾ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
----------