ಎಮ್ಮಿಗನೂರು ಗ್ರಾಮದಲ್ಲಿ ಹಳ್ಳದಲ್ಲಿ ಮುಳುಗಿ ಎರಡು ಎತ್ತುಗಳು ದುರ್ಮರಣ: ರೈತ ಕುಟುಂಬ ಕಣ್ಣೀರು
ಬಳ್ಳಾರಿ ಜಿಲ್ಲೆ ಕಂಪ್ಲಿ ತಾಲೂಕಿನ ಎಮ್ಮಿಗನೂರು ಗ್ರಾಮದಲ್ಲಿ ದುರ್ಘಟನೆ ಸಂಭವಿಸಿದ್ದು, ರೈತ ಜಡೇಪ್ಪ ಗೂಂಡುರು ಅವರ ಎರಡು ಎತ್ತುಗಳು(ಹಳ್ಳ) ಮಡುವಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ನಿನ್ನೆ ನಡೆದಿದೆ.
ರೈತ ಜಡೇಪ್ಪ ಗೂಂಡುರು ಹೊಲದಲ್ಲಿ ಕೆಲಸ ಮುಗಿಸಿ, ಎತ್ತುಗಳಿಗೆ ಮೈತೊಳೆಯಲು ಹಳ್ಳಕ್ಕೆ ಕರೆದೊಯ್ದಿದ್ದ. ಈ ವೇಳೆ, ಏಕಾಏಕಿ ಒಂದು ಎತ್ತು ಬೆದರಿದ ಪರಿಣಾಮ, ಬಂಡಿಯ ಸಮೇತ ಹಳ್ಳದಲ್ಲಿ ಜಿಗಿದಿದೆ. ಇದರಿಂದಾಗಿ, ಎರಡೂ ಎತ್ತುಗಳು ನೀರಲ್ಲಿ ಮುಳುಗಿ ಉಸಿರುಗಟ್ಟಿ ಸಾವನ್ನಪ್ಪಿವೆ.
ಈ ಅಕಾಲಿಕ ನಷ್ಟದಿಂದಾಗಿ ರೈತ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಕುರಿತು ಸ್ಥಳೀಯ ಆಡಳಿತ ಮತ್ತು ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳು ಸೂಕ್ತ ಪರಿಹಾರ ಒದಗಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
Tags
ಟಾಪ್ ನ್ಯೂಸ್