ಭಾರತ್ ಸ್ಕೌಟ್ ಮತ್ತು ಗೈಡ್ಸ್ ಸಂಸ್ಥಾಪಕರ ಜನ್ಮದಿನ ಚಿಂತನಾ ದಿನಾಚರಣೆ
ಭಾರತ್ ಸ್ಕೌಟ್ ಮತ್ತು ಗೈಡ್ಸ್ ಕರ್ನಾಟಕ, ಸ್ಥಳೀಯ ಸಂಸ್ಥೆ ಕಂಪ್ಲಿ ವತಿಯಿಂದ ಇಂದು ವಿಜಯನಗರ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಚಿಂತನಾ ದಿನಾಚರಣೆ ನಡೆಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಬಸವರಾಜ್, ಕಾರ್ಯದರ್ಶಿ ಕೆ. ವಿಷ್ಣು, ಸಹಾಯಕ ಜಿಲ್ಲಾ ಆಯುಕ್ತೆ ಸೀತು ಚಕ್ರಬೋರ್ತಿ, ಹಾಗೂ ಸಂಸ್ಥೆಯ ಪದಾಧಿಕಾರಿಗಳಾದ ಶಶಿಕಲಾ, ರಾಜೇಶ್, ಸುನಿಲ್ ಮಾಲಿಪಾಟೀಲ್ ಮತ್ತು ಶ್ರೀವಿದ್ಯಾ ಸ್ಕೌಟ್ ಧ್ವಜಾರೋಹಣ ನಡೆಸಿದರು. ಬಳಿಕ ಲಾರ್ಡ್ ಬೆಡನ್ ಪಾವೆಲ್ ಮತ್ತು ಲೇಡಿ ಬೆಡನ್ ಪಾವೆಲ್ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಲಾಯಿತು.
ಕಾರ್ಯದರ್ಶಿ ಕೆ. ವಿಷ್ಣು ಅವರು ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಾಪನೆಯ ಕುರಿತು ಮಕ್ಕಳಿಗೆ ಮಾಹಿತಿ ನೀಡಿದರು. ಅದೇ ರೀತಿ, ಕಾರ್ಯಾಧ್ಯಕ್ಷ ಬಸವರಾಜ್, ಮಕ್ಕಳಿಗೆ ಶಿಸ್ತು, ಸಂಯಮ ಹಾಗೂ ದೇಶ ಸೇವೆಯ ಮಹತ್ವವನ್ನು ವಿವರಿಸಿ, ಸ್ವಯಂಶ್ರೇಷ್ಟರಾಗಲು ಪ್ರೇರೇಪಿಸಿದರು.
ಸ್ಪರ್ಧೆಗಳು ಮತ್ತು ಪ್ರಶಸ್ತಿ ಪ್ರದಾನ:
ಚಿಂತನಾ ದಿನಾಚರಣೆಯ ಅಂಗವಾಗಿ ರಂಗೋಲಿ, ಚಿತ್ರಕಲಾ, ಬೆಂಕಿ ಇಲ್ಲದೇ ಅಡಿಗೆ, ಹಾಗೂ ಮೆಹಂದಿ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ವಿಜೇತರಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.
ಕಾರ್ಯಕ್ರಮವನ್ನು ಸುನಿಲ್ ಮಾಲಿಪಾಟೀಲ್ ನಿರೂಪಿಸಿದರು, ಮತ್ತು ರಾಜೇಶ್ ವಂದಿಸಿದರು.
Tags
ಟಾಪ್ ನ್ಯೂಸ್