Kampli : ಎರಡು ಎತ್ತುಗಳ ಸಾವಿನಿಂದ ದುಃಖದಲ್ಲಿದ್ದ ರೈತನಿಗೆ ಆರ್ಥಿಕ ಸಹಾಯ ನೀಡಿದ ಮತ್ತೊಬ್ಬ ರೈತ ವೀರೇಶ್

ಎರಡು ಎತ್ತುಗಳ ಸಾವಿನಿಂದ ದುಃಖದಲ್ಲಿದ್ದ ರೈತನಿಗೆ ಆರ್ಥಿಕ ಸಹಾಯ ನೀಡಿದ ಮತ್ತೊಬ್ಬ ರೈತ ವೀರೇಶ್

ಕಂಪ್ಲಿ: ಎಮ್ಮಿಗನೂರಿನ ಹಳ್ಳದೊಂದರಲ್ಲಿ ಎರಡು ಎತ್ತುಗಳು ಮುಳುಗಿ ಸಾವನ್ನಪ್ಪಿರುವ ಘಟನೆ ನಿನ್ನೆ ನಡೆದಿದ್ದು. ಕೃಷಿಕನ ಸ್ವಾಮ್ಯದ ಎರಡು ಎತ್ತುಗಳು ಸಾವನ್ನಪ್ಪಿದ್ದರಿಂದ ರೈತ ಕುಟುಂಬದ ಮೇಲೆ ಆರ್ಥಿಕ ಹೊರೆ ಉಂಟಾಗಿದೆ.

ಈ ದುಃಖದ ಸಂದರ್ಭದಲ್ಲಿ ರೈತ ಸಂಘ ಹಸಿರು ಸೇನೆಯ ವಿರೇಶ್ ಅವರು ರೈತನಿಗೆ ಸಾಂತ್ವನ ಹೇಳಿ ವೈಯುಕ್ತಿಕವಾಗಿ ₹10,000 ಹಣ ಸಹಾಯ ಮಾಡಿದರು. ಅವರ ಈ ಮಾನವೀಯತೆಯ ನಡೆಯನ್ನು ಸ್ಥಳೀಯರು ಮೆಚ್ಚಿಕೊಂಡಿದ್ದಾರೆ.

ರೈತರ ಸಮಸ್ಯೆಗಳಿಗೆ ಸರ್ಕಾರ ಮತ್ತು ಸಮಾಜದಿಂದ ಹೆಚ್ಚಿನ ಬೆಂಬಲ ಸಿಗಬೇಕಾದ ಅಗತ್ಯವಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.

Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">