ಕಲ್ಯಾಣ ಕರ್ನಾಟಕ ಪ್ರಾದೇಶಿಕ ನಿರ್ದೇಶಕರಾದ ಜೆ ಚಂದ್ರಶೇಖರ್ ಅವರಿಂದ ವಿಶೇಷ ಚೇತನರಿಗೆ ಉಚಿತವಾಗಿ ಪರಿಕರಗಳ ವಿತರಣೆ ಹಾಗೂ ಆರೋಗ್ಯ ವಿಮೆ ಮಂಜೂರಾತಿ ಪತ್ರಗಳ ವಿತರಣೆ ಕಾರ್ಯಕ್ರಮ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ B C ಟ್ರಸ್ಟ್ ವತಿಯಿಂದ ಪರಮಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಅಧ್ಯಕ್ಷತೆಯಲ್ಲಿ ಕರ್ನಾಟಕ ರಾಜ್ಯದಂತ ಅನುಷ್ಠಾನ ಮಾಡುತ್ತಿರುವ ಜನ ಮಂಗಲ ಕಾರ್ಯಕ್ರಮದ ಯೋಜನೆ ಅಡಿಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ವಿಶೇಷ ಚೇತನರಿಗೆ ಅನುಕೂಲವಾಗುವಂತೆ ವಿವಿಧ ರೀತಿಯ ಪರಿಕರಗಳನ್ನು ಉಚಿತವಾಗಿ ವಿತರಣೆ ಮಾಡಿಕೊಂಡು ಬರುತ್ತಿದ್ದು ಈ ದಿನ ಕಂಪ್ಲಿ ತಾಲೂಕಿನ ರಾಮಸಾಗರ ಗ್ರಾಮದಲ್ಲಿ ಒಂದು ತಿಂಗಳ ಮುಂಚಿತವಾಗಿ ವಿಶೇಷ ಚೇತನರಾದ ಕೊರವರ ಗಾದೆಮ್ಮ, ಹಾಗೂ K ಜಂಬಣ್ಣ ಅವರನ್ನು ಗುರುತಿಸಿ ಕೊರವರ ಗಾದೆಮ್ಮನಿಗೆ ವಾಟರ್ ಬೆಡ್ ಬೇಡಿಕೆ ಮನವಿ ಮತ್ತು K ಜಂಬಣ್ಣ ಅವರಿಗೆ U ಸೇಫ್ ವಾಕರ್ ಬೇಡಿಕೆ ಮನವಿ ನೀಡಲು ತಿಳಿಸಿಲಾಗಿತ್ತು.ಸದ್ರಿ ಸದಸ್ಯರು ಬೇಡಿಕೆಗೆ ಮನವಿ ನೀಡಿದ್ದು ಇದನ್ನು ಕ್ಷೇತ್ರಕ್ಕೆ ಪೂಜ್ಯರ ಮಂಜೂರಾತಿಗೆ ಕಳುಹಿಸಿಕೊಟ್ಟಿದ್ದು ಪೂಜ್ಯರು ಮಂಜೂರಾತಿ ನೀಡಲಾಗಿದ್ದು ಮಂಜೂರಾತಿ ಗೊಂಡಿರುವ ವಾಟರ್ ಬೆಡ್, U ಸೇಫ್ ವಾಕರ್ ಗಳನ್ನು ಇಂದು ಕಲ್ಯಾಣ ಕರ್ನಾಟಕ ಪ್ರಾದೇಶಿಕ ವ್ಯಾಪ್ತಿಯ ಗೌರವಾನ್ವಿತ ಪ್ರಾದೇಶಿಕ ನಿರ್ದೇಶಕರಾದ ಜೆ ಚಂದ್ರಶೇಖರ ಸರ್ ಅವರು ಫಲಾನುಭವಿಗೆ ವಿತರಣೆ ಮಾಡಿ, ಕುಟುಂಬದ ಸದಸ್ಯರಿಗೆ ಸಾಂತ್ವಾನ ಹೇಳಿ ಭಾಗವಹಿಸಿದ ಸದಸ್ಯರಿಗೆ ಯೋಜನೆಯ ಹತ್ತು ಹಲವು ಕಾರ್ಯಕ್ರಮಗಳಾದ, ನಮ್ಮೂರು ನಮ್ಮ ಕೆರೆ ಅಭಿವೃದ್ಧಿ, ಹಿಂದೂ ರುದ್ರಭೂಮಿ ಅಭಿವೃದ್ಧಿ,ಸುಜ್ಞಾನ ನಿಧಿ ಶಿಷ್ಯ ವೇತನ, ಶಾಲೆಗಳಿಗೆ ಡೆಸ್ಕ್ ಬೆಂಚ್ ವಿತರಣೆ, ಶಾಲೆಗಳಿಗೆ ಜ್ಞಾನದೀಪ ಶಿಕ್ಷಕರ ನೇಮಕ, ದೇವಸ್ಥಾನ ಜೀರ್ಣೋದ್ಧಾರಕ್ಕೆ ಸಹಾಯಧನ,ಶುದ್ಧ ಗಂಗಾ ಘಟಕಗಳ ನಿರ್ಮಾಣ,ಮಾಶಾಸನ ವಿತರಣೆ,ವಾತ್ಸಲ್ಯ ಕಾರ್ಯಕ್ರಮ, ಕೃಷಿಕ ರೈತರಿಗೆ ಯಂತ್ರಗಳ ವದಗಣೆ ಹಾಗೂ ಸ್ವ-ಸಹಾಯ ತಂಡಗಳ ಸದಸ್ಯರಿಗೆ ರಾಷ್ಟ್ರೀಕೃತ ಬ್ಯಾಂಕುಗಳ ಮೂಲಕ ಸದಸ್ಯರ ಪ್ರಗತಿಗಾಗಿ ಪ್ರಗತಿ ನಿಧಿ ವಿತರಣೆ, ವಿಮಾ ಕಾರ್ಯಕ್ರಮಗಳು ಈ ಎಲ್ಲಾ ವಿಷಯಗಳ ಬಗ್ಗೆ ವಿಸ್ತಾರವಾದಂತಹ ಮಾಹಿತಿ ಮಾರ್ಗದರ್ಶನ ನೀಡಿದರು.ಇದೇ ಸಂದರ್ಭದಲ್ಲಿ ಆರೋಗ್ಯ ವಿಮಾ ಯೋಜನೆಯಡಿಯಲ್ಲಿ ಸ್ವ ಸಹಾಯ ತಂಡದ ಸದಸ್ಯರು ಆರೋಗ್ಯ ಸಮಸ್ಯೆ ಇರುವ ಬಗ್ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿರುವ ಸದಸ್ಯರುಗಳಾದ B ರಾಜೇಶೇಖರ್ ಕಂಪ್ಲಿ,V ಈರಮ್ಮ, ಚಿಕ್ಕಜಾಯಿಗನೂರ, ಕೃಷ್ಣ ವೇಣಿ ಹಂಪಾದೇವನಹಳ್ಳಿ,C ನೇತ್ರಾವತಿ ರಾಮಸಾಗರ,ಮತ್ತು ವಿದ್ಯಾ ಕಲ್ಲಂಬ ಈ ಗ್ರಾಮದ ಸದಸ್ಯರಿಗೆ ಆರೋಗ್ಯ ವಿಮಾ ಕಾರ್ಯಕ್ರಮದ ಅಡಿಯಲ್ಲಿ ಪ್ರತಿ ಸದಸ್ಯರಿಗೆ 20000/-ಸಾವಿರದಂತೆ 09 ಜನರಿಗೆ ಒಟ್ಟು 180000/-(ಒಂದು ಲಕ್ಷ ಎಂಬತ್ತು ಸಾವಿರ ರೂಪಾಯಿಗಳು )ಮಂಜೂರಾತಿಗೊಂಡಿದ್ದು ಸದ್ರಿ ಸದಸ್ಯರಿಗೆ ಮಂಜೂರಾತಿ ಪತ್ರಗಳ ವಿತರಣೆ ಮಾಡಿದರು.ಸದ್ರಿ ಕಾರ್ಯಕ್ರಮದಲ್ಲಿ ಬಳ್ಳಾರಿ ಜಿಲ್ಲಾ ನಿರ್ದೇಶಕರಾದ ರೋಹಿತಾಕ್ಷ ಅವರು ಉಪಸ್ಥಿತಿ ಇದ್ದು ಯೋಜನೆಯ ಎಲ್ಲಾ ಕಾರ್ಯಕ್ರಮಗಳನ್ನು ಸದುಪಯೋಗ ಮಾಡಿಕೊಳ್ಳುವ ಬಗ್ಗೆ ಮಾಹಿತಿ ಮಾರ್ಗದರ್ಶನ ನೀಡಿದರು.ಸದ್ರಿ ಕಾರ್ಯಕ್ರಮದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಶ್ರೀಯುತ ಹೇಮಯ್ಯ ಸ್ವಾಮಿ,ಹಾಗೂ ಡಾ. ವೆಂಕಟೇಶ್ ಭರ್ಮಕ್ಕನವರ ಅವರು ಯೋಜನೆಯ ಎಲ್ಲಾ ಅತ್ಯುತ್ತಮ ಕಾರ್ಯಕ್ರಮಗಳನ್ನು ಪ್ರಾಮಾಣಿಕವಾಗಿ,ಬಳಕೆ ಮಾಡಿಕೊಂಡು, ಒಂದು ಸುಂದರ ಕುಟುಂಬ ನಿರ್ಮಾಣ ಮಾಡಿಕೊಳ್ಳುವ ಬಗ್ಗೆ ಶುಭ ಹಾರೈಸಿದರು,ಕಾರ್ಯಕ್ರಮದಲ್ಲಿ ತಾಲೂಕಿನ ಯೋಜನಾಧಿಕಾರಿಗಳಾದ ಹಾಲಪ್ಪ M,ಕೃಷಿ ಅಧಿಕಾರಿಗಳಾದ, ಸಂಜುಕುಮಾರ್, ಮೇಲ್ವಿಚಾರಕರಾದ ಮಂಜುಳಾ, ರಾಜು,ಕುಮಾರ ಅವಿನಾಶ್, ಮತ್ತು ಸ್ವ-ಸಹಾಯ ಸಂಘದ ಸದಸ್ಯರ ಉಪಸ್ಥಿತಿಯಲ್ಲಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಯಿತು.