ಹಳೆ ಬಸ್ ನಿಲ್ದಾಣದ ಮಧ್ಯದ ಅಂಗಡಿಗಳ ಸ್ಥಳಾಂತರಕ್ಕೆ ಒತ್ತಾಯ
ಕಂಪ್ಲಿ: ಪಟ್ಟಣದ ಹಳೆ ಬಸ್ ನಿಲ್ದಾಣದ ಮಧ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಜೆಎಂಜೆ ಎಂಟರ್ಪ್ರೈಸಸ್ ಮತ್ತು ಉದಯ ಎಂಟರ್ಪ್ರೈಸಸ್ ಅಂಗಡಿಗಳನ್ನು ತಕ್ಷಣ ಸ್ಥಳಾಂತರಗೊಳಿಸಲು ಭೀಮ್ ಆರ್ಮಿ ಸಂಘಟಕರು ಒತ್ತಾಯಿಸಿದ್ದಾರೆ.
ಈ ಪ್ರದೇಶವು ಜನಸಂಚಾರ ಹೆಚ್ಚಿರುವ ಮುಖ್ಯ ಮಾರ್ಗವಾಗಿದ್ದು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಪ್ರತಿದಿನ ಹಾದುಹೋಗುವ ಪ್ರದೇಶವಾಗಿದೆ. ಅಂಗಡಿಗಳ ಅಸ್ಥಿತ್ವದಿಂದ ಮಹಿಳೆಯರಿಗೆ, ವಾಹನ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಇದಲ್ಲದೆ, ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ ವೃತ್ತದ ಸುತ್ತಮುತ್ತ ಈ ಅಕ್ರಮ ಅಂಗಡಿಗಳ ಉಪಸ್ಥಿತಿ ಅವಮಾನಕಾರಿಯಾಗಿದ್ದು, ಸಾರ್ವಜನಿಕ ಹಿತದೃಷ್ಟಿಯಿಂದ ಅವುಗಳನ್ನು ಸ್ಥಳಾಂತರಗೊಳಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಸಮಯೋಚಿತ ಕ್ರಮ ಕೈಗೊಳ್ಳದಿದ್ದರೆ, ಸಂಘಟನೆಗಳು ಸಾರ್ವಜನಿಕರೊಂದಿಗೆ ಹೋರಾಟಕ್ಕೆ ಇಳಿಯುವಂತಾಗಬಹುದು ಎಂದು ಭೀಮ್ ಆರ್ಮಿಯ ತಾಲೂಕು ಅಧ್ಯಕ್ಷ ರವಿ ಮಣ್ಣೂರ, ದಲಿತ ಮುಖಂಡ ಕೆ.ಲಕ್ಷ್ಮಣ, ಹುಸೇನ್ ರವರು ಎಚ್ಚರಿಸಿದ್ದಾರೆ