ಬಿಡಾಡಿ ದನಗಳನ್ನು ಮಾಲೀಕರು ಮನೆಯಲ್ಲಿ ಕಟ್ಟಿಕೊಳ್ಳಿ; ಇಲ್ಲದಿದ್ದರೆ ಕ್ರಮ
ಕಂಪ್ಲಿ : ಕಂಪ್ಲಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಬಿಡಾಡಿ ದನಗಳು ಹೆಚ್ಚಾಗುತ್ತಿದ್ದು, ಸಾರ್ವಜನಿಕರ ಪ್ರಾಣ ಹಾನಿ ಹಿನ್ನಲೆಯಲ್ಲಿ ಬಿಡಾಡಿ ದನಗಳ ಮಾಲೀಕರು ತಮ್ಮ ತಮ್ಮ ದನಕರಗಳನ್ನು ತಮ್ಮ ಮನೆಯಲ್ಲಿಯೇ ಕಟ್ಟಿಹಾಕಿಕೊಳ್ಳಬೇಕು. ಇಲ್ಲದಿದ್ದಲ್ಲಿ ಬೀದಿ ದನಗಳನ್ನು ಹಿಡಿದು ಗೋಶಾಲೆಗಳಿಗೆ ಸಾಗಿಸಲು ಕ್ರಮ ವಹಿಸಲಾಗುವುದು ಮತ್ತು ದನಕರುಗಳನ್ನು ಹಿಡಿಯುವವರು ಯಾರಾದರೂ ಇದ್ದಲ್ಲಿ ಪುರಸಭೆ ಕಚೇರಿಗೆ ಸಂಪರ್ಕಿಸಬಹುದು ಎಂದು ಕಂಪ್ಲಿ ಪುರಸಭೆ ಮುಖ್ಯಾಧಿಕಾರಿ ಕೆ.ದುರುಗಣ್ಣ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
---------
Tags
ಟಾಪ್ ನ್ಯೂಸ್