ಕಂಪ್ಲಿ ಪುರಸಭೆ: ಆಸ್ತಿ ತೆರಿಗೆ ಪಾವತಿಸಲು ಸೂಚನೆ
ಕಂಪ್ಲಿ : ಪುರಸಭೆ ವ್ಯಾಪ್ತಿಯಲ್ಲಿ ಕಟ್ಟಡ, ನಿವೇಶನ ಹೊಂದಿರುವ ಆಸ್ತಿ ಮಾಲೀಕರು ಕಡ್ಡಾಯವಾಗಿ ತಮ್ಮ ಆಸ್ತಿ ತೆರಿಗೆ ಪಾವತಿಸಬೇಕು ಎಂದು ಕಂಪ್ಲಿ ಪುರಸಭೆ ಮುಖ್ಯಾಧಿಕಾರಿಯವರು ತಿಳಿಸಿದ್ದಾರೆ.
ಕಂಪ್ಲಿ ಪುರಸಭೆ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಜಾಗ, ಅರೆ ಸರ್ಕಾರಿ, ಸ್ಥಳೀಯ ಸಂಸ್ಥೆಗಳ ಒಡೆತನದಲ್ಲಿರುವ ಸ್ವತ್ತುಗಳನ್ನು ಹೊರತುಪಡಿಸಿ ಇನ್ನುಳಿದ ಕಟ್ಟಡ, ನಿವೇಶನಗಳ ಮಾಲೀಕರು ತಮ್ಮ ಆಸ್ತಿಗಳ ಆಸ್ತಿ ತೆರಿಗೆ ಪಾವತಿಸಬೇಕು
ಸಂಬAಧಿಸಿದ ಪೂರಕ ನೋಂದಾಯಿತ ದಾಖಲೆ ಪತ್ರಗಳು, ಸ್ವತ್ತಿನ ಭಾವಚಿತ್ರ, ಮಾಲೀಕರ ಫೋಟೋ, ನಮೂನೆ-15, ವಿದ್ಯುತ್ ಬಿಲ್, ಕುಡಿಯುವ ನೀರಿನ ಬಿಲ್, ಕಟ್ಟಡ ಪರವಾನಗಿ ಮತ್ತು ಅನುಮೋದಿತ ನಕ್ಷೆ, ನಿವೇಶನ ವಿನ್ಯಾಸ ಅನುಮೋದನೆ ಅಥವಾ ಅನುಮೋದಿತ ಬಡಾವಣೆಯ ನಕ್ಷೆ, ಆರ್‌ಟಿಸಿ, ಮ್ಯೂಟೇಶನ್ ನಕಲು ಪ್ರತಿ, ಮಾಲೀಕರ ಆಧಾರ್ ಕಾರ್ಡ್ ಪ್ರತಿ, ಮಾಲೀಕರ ಪಾನ್ ಕಾರ್ಡ್ ಪ್ರತಿ ಅಥವಾ ಚುನಾವಣಾ ಗುರುತಿನ ಚೀಟಿ ಹಾಗೂ ಇತರೆ ಅವಶ್ಯಕ ದಾಖಲಾತಿಗಳನ್ನು ಪುರಸಭೆ ಕಚೇರಿಗೆ ಸಲ್ಲಿಸಿ ಸ್ವತ್ತಿಗೆ ಸಂಬAಧಪಟ್ಟ ತೆರಿಗೆ ಪಾವತಿಸಬೇಕು.
ಆಸ್ತಿಯನ್ನು ಗಣಕೀಕರಿಸಿಕೊಂಡು ನಮೂನೆ-3, ನಮೂನೆ-3ಎ ಪಡೆದುಕೊಂಡು ನೋಂದಾಯಿತ ಕಚೇರಿಯಲ್ಲಿ ಕ್ರಯ ಪತ್ರ, ದಾನ ಪತ್ರ, ವಿಭಾಗ ಪತ್ರ ಹಕ್ಕು, ಖುಲಾಸೆ ಹಾಗೂ ಇತರೆ ದಾಖಲೆ ಪತ್ರ ನೋಂದಣಿ ಮಾಡಿಸಿಕೊಂಡು ಸರ್ಕಾರದ ಸೌಲಭ್ಯ ಪಡೆದುಕೊಳ್ಳಬಹುದು.
ತಪ್ಪಿದಲ್ಲಿ ಸಂಬAಧಪಟ್ಟ ಆಸ್ತಿ ಮಾಲೀಕರುಗಳಿಗೆ ನಿಯಮ 10ಎ ರಂತೆ ನಿಯಮಾನುಸಾರ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಕಂಪ್ಲಿ ಪುರಸಭೆಯ ಮುಖ್ಯಾಧಿಕಾರಿಗಳ ಕಚೇರಿ, ಕಂದಾಯ ಶಾಖೆಯ ಕಂದಾಯ ಅಧಿಕಾರಿ ಅಥವಾ ಮೊ.9886362003, 9916907008, 9845509950 ಗೆ ಸಂಪರ್ಕಿಸಬಹುದು ಎಂದು ಮುಖ್ಯಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-----------