ಬುಲೋರೋ ಡಿಕ್ಕಿ: ಕಂಪ್ಲಿಯ ಹಳೆ ಬಸ್ ನಿಲ್ದಾಣದಲ್ಲಿ ಯುವಕ ಸ್ಥಳದಲ್ಲೇ ಸಾವು
ಕಂಪ್ಲಿ: ಗಾಂಧಿನಗರದ ಯುವಕ ಪ್ರಸಾದ್ (22), ತಂದೆ (ದಿ)ಓಬಳೇಶ್, ತಾಯಿ ಲಕ್ಷ್ಮೀ, ಕಂಪ್ಲಿಯ ಹಳೆ ಬಸ್ ನಿಲ್ದಾಣದ ಹತ್ತಿರ ರಸ್ತೆ ಪಕ್ಕ ನಿಂತಿದ್ದ ವೇಳೆ, ಅತಿವೇಗವಾಗಿ ಬಂದ ಬುಲೋರೋ ವಾಹನ ಢಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಸ್ಥಳೀಯರು ಮಾಹಿತಿ ನೀಡಿದ ಬೆನ್ನಲ್ಲೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಂತರ ಮೃತದೇಹವನ್ನು ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ರವಾನೆ ಮಾಡಲಾಗಿದೆ.