Yadagiri : ವಿಶ್ವ ವಿಖ್ಯಾತ ಹಂಪಿ ಉತ್ಸವದ ಮಹಿಳಾ ಕವಿಗೋಷ್ಠಿಗೆ ಶ್ರೀಮತಿ ನೀಲಮ್ಮಬಿ.ಮಲ್ಲೆ ಆಯ್ಕೆ


ವಿಶ್ವ ವಿಖ್ಯಾತ ಹಂಪಿ ಉತ್ಸವದ ಮಹಿಳಾ ಕವಿಗೋಷ್ಠಿಗೆ ಶ್ರೀಮತಿ ನೀಲಮ್ಮಬಿ.ಮಲ್ಲೆ ಆಯ್ಕೆ

ಯಾದಗಿರಿ : ವಿಶ್ವ ಪರಂಪರೆಯ ತಾಣವಾದ ವಿರೂಪಾಕ್ಷ ದೇವಾಲಯ, ಹಂಪಿ ಸಮೂಹ ಸ್ಮಾರಕಗಳು ,ವಾಸ್ತುಶಿಲ್ಪ, ವಿಶ್ವವಿಖ್ಯಾತ ಹಂಪಿ ಉತ್ಸವ 2025 ರ ಮಹಿಳಾ ಕವಿ ಗೋಷ್ಠಿಗೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಶಿಕ್ಷಕಿ, ಲೇಖಕಿ, ಕವಿಯತ್ರಿ, ಮತ್ತು ಗಜಲ್ ಗಾರ್ತಿ ಯಾದಂತಹ ಶ್ರೀಮತಿ ನೀಲಮ್ಮ ಬಿ. ಮಲ್ಲೆ ಕೆಂಭಾವಿ, ತಾ. ಸುರುಪುರ ಅವರ ವಿಜಯನಗರ ಜಿಲ್ಲೆಯ ಕಲೆ, ಸಾಹಿತ್ಯ, ವಾಸ್ತುಶಿಲ್ಪ ಮತ್ತು ಸಂಸ್ಕೃತಿಯನ್ನು ಒಳಗೊಂಡ ಕವನವನ್ನು ಆಯ್ಕೆಯನ್ನು ಸಮಿತಿಯ ಸರ್ವಾನುಮತದಿಂದ ಆಯ್ಕೆ ಮಾಡಿ ಬರುವ 28 - ಪೆಬ್ರುವರಿ 2025 ರ ಹಂಪಿ ಉತ್ಸವದ ಮಹಿಳಾ ಕವಿಗೋಷ್ಠಿಗೆ ಆಹ್ವಾನ ನೀಡಲಾಗಿದೆ ಎಂದು ವಿಜಯನಗರ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಈ ಸಂತಸಕ್ಕೆ ಶ್ರೀಮತಿ ನೀಲಮ್ಮ ಬಿ. ಮಲ್ಲೆ ಅವರ ಅಭಿಮಾನಿ ಬಳಗ, ಸಾಹಿತ್ಯದ ಬಳಗ ಮತ್ತು ಶಿಕ್ಷಣ ಇಲಾಖೆಯ ಆಡಳಿತ ಮಂಡಳಿಯವರು ಶುಭಾಶಯಗಳು ತಿಳಿಸಿ ಅಭಿನಂದಿಸಿ ಶುಭ ಹಾರೈಸಿರುತ್ತಾರೆ.

ರಾಹುಲ್, ಸಿದ್ದಿ ಟಿವಿ, ಯಾದಗಿರಿ

Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">