Kampli: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ B C ಟ್ರಸ್ಟ್ ವತಿಯಿಂದ "ನೀರು ಉಳಿಸಿ" ಕರಪತ್ರ ವಿತರಣೆ ಕಾರ್ಯಕ್ರಮ


ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ BC ಟ್ರಸ್ಟ್ ವತಿಯಿಂದ "ನೀರು ಉಳಿಸಿ" ಕರಪತ್ರ ವಿತರಣೆ ಕಾರ್ಯಕ್ರಮ

ಕಂಪ್ಲಿ: ವಿಶ್ವ ಜಲ ದಿನಾಚರಣೆಯ ಅಂಗವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ B C ಟ್ರಸ್ಟ್ ವತಿಯಿಂದ "ನೀರು ಉಳಿಸಿ" ಅಭಿಯಾನವನ್ನು ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿದೆ. ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಈ ಅಭಿಯಾನವನ್ನು ಗ್ರಾಮೀಣ ಪ್ರದೇಶದ ಜನತೆಗೆ ಜಾಗೃತಿಗಾಗಿ ರೂಪಿಸಲಾಗಿದೆ.

ಈ ಪ್ರಯುಕ್ತ, ಕಂಪ್ಲಿ ತಾಲೂಕಿನಲ್ಲಿ ಯೋಜನಾಧಿಕಾರಿಗಳಾದ ಹಾಲಪ್ಪ ಎಂ ಅವರ ನೇತೃತ್ವದಲ್ಲಿ ಕಾರ್ಯಕರ್ತರ ಸಭೆ ನಡೆಯಿತು. ಸಭೆಯಲ್ಲಿ, ನೀರಿನ ಸಂರಕ್ಷಣೆಯ ಅಗತ್ಯತೆಯ ಬಗ್ಗೆ ಮಾಹಿತಿ ನೀಡಲಾಯಿತು. ಜನರು ನೀರನ್ನು ಮಿತವಾಗಿ ಬಳಸುವ ಮತ್ತು ಮುಂದಿನ ಪೀಳಿಗೆಗೆ ಸಂಗ್ರಹಿಸುವ ಮಹತ್ವವನ್ನು ಅರಿತುಕೊಳ್ಳಬೇಕು ಎಂಬ ಆಶಯವನ್ನು ಈ ಸಭೆಯಲ್ಲಿ ಹಂಚಿಕೊಳ್ಳಲಾಯಿತು.

ಕಾರ್ಯಕ್ರಮದ ಅಂಗವಾಗಿ, ಊರಿನ ಪ್ರತಿ ಮನೆ, ಶಾಲೆ, ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ "ನೀರು ಉಳಿಸಿ" ಎಂಬ ಸಂದೇಶ ಸಾರುವ ಕರಪತ್ರಗಳನ್ನು ವಿತರಣೆ ಮಾಡಲಾಯಿತು. ಬೇಸಿಗೆ ದಿನಗಳಲ್ಲಿ ಪ್ರಾಣಿ ಮತ್ತು ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಜನರಿಗೆ ಪ್ರೇರಣೆಯನ್ನು ನೀಡಲಾಯಿತು. ಇದನ್ನು ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲು, ಕಂಪ್ಲಿ ಯೋಜನಾ ಕಚೇರಿ ಕಟ್ಟಡದಲ್ಲಿ ಪಕ್ಷಿಗಳಿಗೆ ನೀರು ಇಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಈ ಕಾರ್ಯಕ್ರಮದಲ್ಲಿ ತಾಲೂಕಿನ ಕೃಷಿ ಅಧಿಕಾರಿ ಸಂಜುಕುಮಾರ್, ವಿಚಕ್ಷಣಾಧಿಕಾರಿ ಚೆನ್ನಮಲ್ಲಯ್ಯ, ಜ್ಞಾನವಿಕಾಸ ಸಮನ್ವಯಾಧಿಕಾರಿ ರೇಖಾ, ಮೇಲ್ವಿಚಾರಕರು ರಾಜು, ಮಂಜುಳಾ, ಮಂಜುನಾಥ್, ಪ್ರಭು, ಅನಸೂಯಾ, ಜಯಲಕ್ಷ್ಮಿ, ರವಿಚಂದ್ರ ಹಾಗೂ ಕಚೇರಿಯ ಎಲ್ಲಾ ಸಿಬ್ಬಂದಿಗಳು ಭಾಗವಹಿಸಿದರು. ನೀರು ಸಂರಕ್ಷಣೆ ಮತ್ತು ಪರಿಸರ ಹಿತಕ್ಕಾಗಿ ಹಮ್ಮಿಕೊಂಡ ಈ ಕಾರ್ಯಕ್ರಮವನ್ನು ಜನಸಾಮಾನ್ಯರು ಪ್ರಶಂಸಿಸಿದರು.

Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">