ಕಂಪ್ಲಿಯಲ್ಲಿ ಗ್ರಾಮ ಮಟ್ಟದ ಕೂಸಿನ ಮನೆ ಕಾರ್ಯಕ್ರಮ : ಸಮಿತಿ ಪದಾಧಿಕಾರಿಗಳಿಗೆ ತರಬೇತಿ
ಇಂದು ಕಂಪ್ಲಿ ತಾಲೂಕಿನ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಗ್ರಾಮ ಮಟ್ಟದ ಕೂಸಿನ ಮನೆ ಸಮಿತಿ ಪದಾಧಿಕಾರಿಗಳಿಗೆ ಒಂದು ದಿನದ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವನ್ನು ಸಹಾಯಕ ನಿರ್ದೇಶಕರಾದ ಮಲ್ಲನಗೌಡ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಸಹಾಯಕ ಲೆಕ್ಕಾಧಿಕಾರಿಗಳಾದ ನಾರಾಯಣಸ್ವಾಮಿ, ತಾಲೂಕ ಪಂಚಾಯತ್ ಕಂಪ್ಲಿ, ದೇವಲಾಪುರ, ರಾಮಸಾಗರ, ಮೆಟ್ರಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಈರಮ್ಮ ಪೂಜಾರಿ, ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಬೀರಲಿಂಗಪ್ಪ, ಹನುಮಂತಪ್ಪ ಸೇರಿದಂತೆ ಗ್ರಾಮ ಮಟ್ಟದ ಕೂಸಿನ ಮನೆ ಮೇಲ್ವಿಚಾರಣ ಸಮಿತಿಯ ಪದಾಧಿಕಾರಿಗಳು ಹಾಜರಿದ್ದರು.
ತದ್ಭಾವಿಯಾಗಿ ತರಬೇತಿದಾರರಾದ ಲತಿಪ್ ಬೇಗಂ, ನರೇಗಾ ತಾಲೂಕು ಸಂಯೋಜಕರಾದ ಹನುಮೇಶ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾರ್ಗದರ್ಶನ ನೀಡಿದರು.
Tags
ಟಾಪ್ ನ್ಯೂಸ್