ಹಬ್ಬದ ಸಂಭ್ರಮದಲ್ಲಿ ಯುವಕರು ಎಚ್ಚರಿಕೆಯಿಂದಿರಲಿ!
ಕಂಪ್ಲಿ :ಹೊಳಿ ಹಬ್ಬದ ಸಂಭ್ರಮ ಎಲ್ಲೆಡೆಯಲ್ಲೂ ಉತ್ಸಾಹದ ಹೊಳೆ ಹರಿಯುತ್ತಿದೆ. ಆದರೆ ಈ ಹಬ್ಬದ ಹರ್ಷದ ನಡುವೆ ಜೀವದ ಭದ್ರತೆ ಕೂಡ ಅಷ್ಟೇ ಮುಖ್ಯ. ಕಳೆದ ನಾಲ್ಕು-ಐದು ವರ್ಷಗಳಿಂದ ಹಬ್ಬದ ಸಂದರ್ಭದಲ್ಲಿ ಕಂಪ್ಲಿ ನದಿಯಲ್ಲಿ ಯುವಕರ ದುರ್ಮರಣಗಳ ಘಟನೆಗಳು ವರದಿಯಾಗಿವೆ. ಈ ಬಾರಿ ನದಿಯ ನೀರಿನ ಮಟ್ಟ ಹೆಚ್ಚಿದ್ದು, ಅಕ್ರಮ ಮರಳು ಗಣಿಗಾರಿಕೆಯಿಂದ ತಗ್ಗು ಗುಂಡಿಗಳು ಉಂಟಾಗಿವೆ. ಜೊತೆಗೆ, ನದಿಯಲ್ಲಿ ಮೊಸಳೆಗಳ ಸಂಖ್ಯೆ ಹೆಚ್ಚಿದ ಬಗ್ಗೆ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಯುವಕರಿಗೆ ಎಚ್ಚರಿಕೆ:ನದಿಯಲ್ಲಿ ಈಜಲು ಹೋಗುವ ಪ್ರವೃತ್ತಿ ಪ್ರಾಣಾಪಾಯಕ್ಕೆ ಕಾರಣವಾಗಬಹುದು. ಎಚ್ಚರಿಕೆ ಕೈಗೊಳ್ಳದೆ ನದಿಗೆ ಇಳಿದರೆ, ಅಪಾಯ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದುದರಿಂದ ಯಾರೂ ನದಿಗೆ ಇಳಿಯಬೇಡಿ!
ಸ್ಥಳೀಯ ಪೊಲೀಸರಿಂದ ತ್ವರಿತ ಕ್ರಮದ ಅಗತ್ಯ:ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಕಂಪ್ಲಿ ಹಾಗೂ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಗಳು ತಕ್ಷಣ ಕ್ರಮ ಕೈಗೊಳ್ಳಬೇಕು. ನದಿಪಾತ್ರದಲ್ಲಿ ಸೂಕ್ತ ಮುನ್ನೆಚ್ಚರಿಕೆ ಸೂಚನೆಗಳನ್ನು ಲಗತ್ತಿಸಬೇಕು, ನೀರಿನಲ್ಲಿ ಇಳಿಯದಂತೆ ಜನರಲ್ಲಿ ಜಾಗೃತಿ ಮೂಡಿಸಬೇಕು.
ಸಮಾಜದ ಜವಾಬ್ದಾರಿ: ಸಾಧಾರಣ ಹುಚ್ಚು ಸಾಹಸಕ್ಕಾಗಿ ತಾವು ಹಾಗೂ ಕುಟುಂಬ ದುಃಖಕ್ಕೆ ತುತ್ತಾಗಬೇಡಿ. ತಮ್ಮ ಜೀವದ ಜೊತೆ ಆಟವಾಡಬೇಡಿ. ಪ್ರತಿ ವರ್ಷ ನದಿಯಲ್ಲಿ ಈಜಲು ಹೋಗಿ ಅಮೂಲ್ಯ ಜೀವಗಳನ್ನು ಕಳೆದುಕೊಂಡ ಪ್ರಕರಣಗಳ ಪಾಠವನ್ನು ಮರೆಯಬೇಡಿ.
ಸಿದ್ದಿ ಟಿವಿ ಕಳಕಳಿ: ಈ ಬಗ್ಗೆ ಹೆಚ್ಚಿನ ಜಾಗೃತಿಗಾಗಿ,ಯುವಕರು, ಸಾರ್ವಜನಿಕರು, ಹಾಗೂ ಸಂಬಂಧಿತ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿ, ಸುರಕ್ಷಿತ ಹಬ್ಬವನ್ನು ಆಚರಿಸೋಣ!