ಅನಾಮದೇಯ ವ್ಯಕ್ತಿ ರಸ್ತೆ ಅಪಘಾತದಲ್ಲಿ ದುರ್ಮರಣ
ಕಂಪ್ಲಿ, ಮಾರ್ಚ್ 21, 2025: ಕಂಪ್ಲಿ ಪೊಲೀಸ್ ಠಾಣಾ ವ್ಯಾಪ್ತಿಯ ಮೆಟ್ರಿ ಗ್ರಾಮದ ಹತ್ತಿರ ರಸ್ತೆ ಅಪಘಾತ ಸಂಭವಿಸಿ ಸುಮಾರು 35-40 ವರ್ಷ ವಯಸ್ಸಿನ ಅನಾಮದೇಯ ವ್ಯಕ್ತಿ ಮೃತಪಟ್ಟಿದ್ದಾರೆ. ಈ ಘಟನೆ ಮಾರ್ಚ್ 21ರ ಬೆಳಗಿನ ಜಾವ 3.00 ರಿಂದ 4.00 ಗಂಟೆಯ ನಡುವೆ ನಡೆದಿದೆ.
ಮೃತದೇಹ ಮೆಟ್ರಿ ಗ್ರಾಮದ ಸುಬ್ಬಮ್ಮವ್ವ ಮಠದ ಬಳಿ, ಶರಣಪ್ಪ ಅವರ ಗದ್ದೆಗಳ ಹತ್ತಿರ ಪತ್ತೆಯಾಗಿದೆ. ಅಪಘಾತಗೊಳಗಾದ ವಾಹನ ನಿಲ್ಲದೇ ಮುಂದುವರಿದಿದ್ದು, ಮೃತದೇಹ ಸುಮಾರು 10 ಅಡಿ ದೂರ ಹೋಗಿ ರಸ್ತೆಯ ಎಡಬದಿಯಲ್ಲಿ ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಅಪಘಾತದಿಂದ ವ್ಯಕ್ತಿಯ ತಲೆಗೆ ಗಂಭೀರ ಗಾಯವಾಗಿದ್ದು, ಎಡಗಣ್ಣು ಹೊರಬಂದಿದೆ. ಬೆನ್ನು ಭಾಗ ಹಾಗೂ ಕಾಲಿಗೆ ತೀವ್ರ ಪೆಟ್ಟಾಗಿದೆ. ಬೆಳಿಗ್ಗೆ 6.00 ಗಂಟೆ ಸುಮಾರಿಗೆ ಮೆಟ್ರಿ ಗ್ರಾಮದ ಗಿರೀಶ್ ಎಂಬುವರು ವಾಕಿಂಗ್ ಹೋಗುವಾಗ ಈ ಘಟನೆಯನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕಂಪ್ಲಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗಿದೆ. ಅಪಘಾತಕ್ಕೆ ಕಾರಣವಾದ ವಾಹನ ಮತ್ತು ಚಾಲಕರ ಕುರಿತು ತನಿಖೆ ಮುಂದುವರಿದಿದೆ.