ಜೆಸಿಐ ಕಂಪ್ಲಿ ಸೋನಾ ವತಿಯಿಂದ ಶುದ್ಧ ಕುಡಿಯುವ ನೀರಿನ ಅರವಟ್ಟಿಗೆ ಉದ್ಘಾಟನೆ
ಕಂಪ್ಲಿ: ಬೇಸಿಗೆಯ ಉಷ್ಣತೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ಲಭ್ಯವಾಗುವಂತೆ ಜೆಸಿಐ ಕಂಪ್ಲಿ ಸೋನಾ ತಂಡ "ಉತ್ಕರ್ಷ 2025" ಕಾರ್ಯಕಾರಿ ಸಮಿತಿಯ ವತಿಯಿಂದ ಶುದ್ಧ ಕುಡಿಯುವ ನೀರಿನ ಅರವಟ್ಟಿಗೆ ವ್ಯವಸ್ಥೆ ಮಾಡಲಾಗಿದೆ.
ಈ ಕಾರ್ಯಕ್ರಮಕ್ಕೆ ಕಂಪ್ಲಿ ಪೊಲೀಸ್ ಠಾಣೆಯ ಪಿ.ಎಸ್.ಐ ಹಾಗೂ ಪುರಸಭೆ ಸದಸ್ಯರು ಚಾಲನೆ ನೀಡಿ, ಅಭಿನಂದನೆ ತಿಳಿಸಿದ್ರು...
ಜೆಸಿಐ ಕಂಪ್ಲಿ ಸೋನಾ 2025ರ ಅಧ್ಯಕ್ಷರು ಜೆಸಿ ಬಿ. ರಸೂಲ್ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ಆಯೋಜನೆಗೊಂಡಿದ್ದು, ಸಮಾಜಮುಖೀ ಕಾರ್ಯಕ್ರಮಗಳ ಮೂಲಕ ಜನಸೇವೆಗೆ ಮುನ್ನಡೆಸುತ್ತಿರುವ ಜೆಸಿಐ ತಂಡದ ಈ ಪ್ರಸ್ತುತ ಕಾರ್ಯವನ್ನು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್ನು ಈ ಸಂದರ್ಭದಲ್ಲಿ ಯುವ ಮುಖಂಡ ಅಕ್ಕಿ ಜಿಲಾನ್, ಪುರಸಭೆ ಸದಸ್ಯ ಸುಧಾಕರ್, ಪುರಸಭೆ ಸಿಬ್ಬಂದಿಗಳು, ಜೆಸಿಐ ಸದಸ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.