Kampli : ಪುರಸಭೆಯಿಂದ ನಿರ್ಗತಿಕ ಹಸು, ದನಗಳ ಸ್ಥಳಾಂತರ ಕಾರ್ಯಾಚರಣೆ


ಕಂಪ್ಲಿ ಪುರಸಭೆಯಿಂದ ನಿರ್ಗತಿಕ ಹಸು, ದನಗಳ ಸ್ಥಳಾಂತರ ಕಾರ್ಯಾಚರಣೆ

ಕಂಪ್ಲಿ: ನಗರದ ಬೀದಿಗಳಲ್ಲಿ ಅಲೆಮಾರಿ ದನಗಳು ಸಂಚಾರಕ್ಕೆ ಅಡಚಣೆಯಾಗಿ, ಸಾರ್ವಜನಿಕರಿಗೆ ತೊಂದರೆ ಉಂಟುಮಾಡುತ್ತಿರುವ ಹಿನ್ನೆಲೆ, ಪುರಸಭೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಈ ದನಗಳನ್ನು ಗೋಶಾಲೆಗೆ ಸ್ಥಳಾಂತರಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಕೆಲ ತಿಂಗಳುಗಳ ಹಿಂದೆ ಪುರಸಭೆಯವರು ದನಗಳ ಮಾಲೀಕರಿಗೆ ಎಚ್ಚರಿಕೆ ನೀಡಿದ್ದರು. ಹಾಗಿದ್ದರೂ ಅನೇಕ ಹಸು, ದನಗಳನ್ನು ಬೀದಿಗಳಲ್ಲೇ ಬಿಡಲಾಗಿದ್ದು, ಈಗ ಅವುಗಳನ್ನು ಹಿಡಿದು ಗೋಶಾಲೆಗೆ ಕಳುಹಿಸುವ ಕಾರ್ಯವನ್ನು ತ್ವರಿತಗತಿಯಲ್ಲಿಂದು ನಿರ್ವಹಿಸಲಾಗುತ್ತಿದೆ.

(ಕಳೆದ ವಾರ ಸಿದ್ದಿ ಟಿವಿಯು ಸಹ ಈ ಕುರಿತಂತೆ ವರದಿ ಮಾಡಿತ್ತು)

ಪುರಸಭೆಯ ಈ ಕ್ರಮವು ಸಾರ್ವಜನಿಕರ ಸುರಕ್ಷತೆ, ಸಂಚಾರ ವ್ಯವಸ್ಥೆ ಸುಗಮಗೊಳಿಸುವುದು ಹಾಗೂ ನಗರ ಸ್ವಚ್ಛತೆಗೆ ಸಹಕಾರಿಯಾಗಲಿದೆ. ಪಶು ಮಾಲೀಕರು ತಮ್ಮ ಪಶುಗಳನ್ನು ತಮ್ಮ ಸ್ಥಳದಲ್ಲೇ ನೋಡಿಕೊಳ್ಳುವಂತೆ ಪುರಸಭೆ ಪುನಃ ಮನವಿ ಮಾಡಿದೆ.


Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">