Kampli: ವಿಶೇಷ ಚೇತನರಿಗೆ ಉಚಿತ ಪರಿಕರ ವಿತರಣೆ ಕಾರ್ಯಕ್ರಮ


ವಿಶೇಷ ಚೇತನರಿಗೆ ಉಚಿತ ಪರಿಕರ ವಿತರಣೆ ಕಾರ್ಯಕ್ರಮ

ರಾಮಸಾಗರ (ಕಂಪ್ಲಿ): ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ B C ಟ್ರಸ್ಟ್ ವತಿಯಿಂದ, ಪರಮಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ, ಗ್ರಾಮೀಣ ಪ್ರದೇಶದ ವಿಶೇಷ ಚೇತನರಿಗೆ ಉಚಿತ ಪರಿಕರ ವಿತರಣೆ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಈ ದಿನ ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ರಾಮಸಾಗರ ಗ್ರಾಮದಲ್ಲಿ ದಾಸರ ಹನುಮಕ್ಕ, ದಾಸರ ರಾಮಚಂದ್ರಪ್ಪ, ಪೂಜಾರಿ ಶಿವಣ್ಣ, ಹನುಮಸಾಗರ ಬಾಳಪ್ಪ ಹಾಗೂ ಹರಿನಾಥ P ಎಂಬ ಐವರು ವಿಶೇಷ ಚೇತನರನ್ನು ಆಯ್ಕೆ ಮಾಡಲಾಗಿತ್ತು. ಅವರು ಬೇಡಿಕೆ ಸಲ್ಲಿಸಿದ ವೀಲ್‌ಚೇರ್, U-ಶೇಪ್ ವಾಕರ್, ಸಿಂಗಲ್ ಹ್ಯಾಂಡ್ ಸ್ಟಿಕ್, ವಾಟರ್ ಬೆಡ್ ಮುಂತಾದ ಪರಿಕರಗಳಿಗೆ ಪೂಜ್ಯರ ಮಂಜೂರಾತಿ ದೊರಕಿದ್ದು, ಶ್ರೀಯುತ ರೋಹಿತಾಕ್ಷ್ (ಬಳ್ಳಾರಿ ಜಿಲ್ಲಾ ಗೌರವಾನ್ವಿತ ನಿರ್ದೇಶಕರು) ಫಲಾನುಭವಿಗಳಿಗೆ ಪರಿಕರ ವಿತರಿಸಿದರು.

ಕಾರ್ಯಕ್ರಮದಲ್ಲಿ ರಾಮಸಾಗರ ಸರ್ಕಾರಿ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಶ್ರೀಯುತ ಅರುಣ್ ಕುಮಾರ್, VRW ಅಧ್ಯಕ್ಷ ಮಲ್ಲಿಕಾರ್ಜುನ, ಯೋಜನಾಧಿಕಾರಿ ಹಾಲಪ್ಪ M, ಕೃಷಿ ಅಧಿಕಾರಿ ಸಂಜುಕುಮಾರ್, ವಲಯ ಮೇಲ್ವಿಚಾರಕಿ ಜಯಲಕ್ಷ್ಮಿ, ಜ್ಞಾನವಿಕಾಸ ಸಮನ್ವಯಾಧಿಕಾರಿ ರೇಖಾ ಸೇರಿದಂತೆ ಹಲವು ಗಣ್ಯರು ಭಾಗವಹಿಸಿ ಮಾರ್ಗದರ್ಶನ ನೀಡಿದರು.

ಸ್ವ-ಸಹಾಯ ಸಂಘದ ಸದಸ್ಯರು, ಸೇವಾ ಪ್ರತಿನಿಧಿಗಳಾದ ಪರಶುರಾಮ್, ರಮೇಶ್, ಶೈಲಜಾ, ಅನ್ನಪೂರ್ಣ, ವಿನೋದ ಹಾಗೂ ಇತರ ಗ್ರಾಮಸ್ಥರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.


Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">