ಭೀಮ್ ಆರ್ಮಿ ಕಂಪ್ಲಿ ತಾಲೂಕು ಘಟಕ ಉದ್ಘಾಟನೆ ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭ
ಕಂಪ್ಲಿ: ನಗರದಲ್ಲಿ ಭೀಮ್ ಆರ್ಮಿ ಭಾರತ್ ಏಕಾತ ಮಿಷನ್‌ನ ಕಂಪ್ಲಿ ತಾಲೂಕು ಘಟಕ ಉದ್ಘಾಟನಾ ಮತ್ತು ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಕಂಪ್ಲಿ ತಾಲೂಕು ಅಧ್ಯಕ್ಷ ಎ.ಎಸ್. ಯಲ್ಲಪ್ಪ ಅವರ ಅಧ್ಯಕ್ಷತೆಯಲ್ಲಿ ಇಂದು ವಿಜೃಂಭಣೆಯಿಂದ ಜರುಗಿತು.

ಕಾರ್ಯಕ್ರಮದಲ್ಲಿ ವಿವಿಧ ಗಣ್ಯರು ಭಾಗವಹಿಸಿ ಭೀಮ್ ಆರ್ಮಿಯ ಮಹತ್ವ, ಸಾಮಾಜಿಕ ನ್ಯಾಯ ಮತ್ತು ಸಮಾನತೆ ಕುರಿತು ಮಾತನಾಡಿದರು. ಭೀಮ್ ಆರ್ಮಿಯ ಈ ಹೊಸ ಘಟಕವು ತಾಲೂಕಿನಲ್ಲಿ ದಲಿತರು, ಪಡಿತರ ವರ್ಗದ ಜನರು ಹಾಗೂ ಸಾಮಾಜಿಕ ಹಕ್ಕುಗಳಿಗಾಗಿ ಹೋರಾಟ ನಡೆಸಲಿದೆ ಎಂದರು.

ಈ ಸಂದರ್ಭದಲ್ಲಿ ಭೀಮ್ ಆರ್ಮಿಯ ಪದಾಧಿಕಾರಿಗಳು ಹಾಗೂ ಕಂಪ್ಲಿಯ ಯುವ ಮುಖಂಡರಾದ ಅಕ್ಕಿ ಜಿಲಾನ್, ರಿಯಾಜ್, ಬಡಿಗೇರ ಜಿಲಾನ್, ಪಿಸಿ ಅಂಜಿನಪ್ಪ, ರಾಮಸಾಗರದ ವೀರೇಶ, ಬಸವರಾಜ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು.
Tags
ಟಾಪ್ ನ್ಯೂಸ್