ಭಾರತಮಾತೆಯ ಹೆಮ್ಮೆಯ ಪುತ್ರಿ ಸುನಿತಾ ವಿಲಿಯಮ್ಸ್
ಸುನಿತಾ ವಿಲಿಯಮ್ಸ್ ಅವರು ಅಂತಿಮವಾಗಿ ಭೂಮಿಗೆ ಬಂದು ಇಳಿದಿದ್ದಾರೆ, ಮಾರ್ಚ್ 19 2025 ಇಂದು ಮುಂಜಾನೆ 3.27ಕ್ಕೆ ಅವರು ಭೂಮಿ ತಲುಪಿದ್ದಾರೆ ,ಈ ಮೂಲಕ ಬರೋಬ್ಬರಿ 9 ತಿಂಗಳ ಬಾಹ್ಯಾಕಾಶ ಬಂಧನ ಅಂತ್ಯವಾಗಿದೆ. ಸುನಿತಾ ವಿಲಿಯಮ್ಸ್ ಅಭಿಮಾನಿ ಬಳಗ ಕುಣಿದಾಡಿದ್ದು, ಅತ್ಯಂತ ಸುರಕ್ಷಿತವಾಗಿ ನಾಸಾ ಸಂಸ್ಥೆಯ ಪ್ಲಾನ್ ಪ್ರಕಾರವೇ ಎಲ್ಲಾ ನಡೆದು ಹೋಗಿದೆ. ಸುನಿತಾ ವಿಲಿಯಮ್ಸ್ ಸೇರಿದಂತೆ ಮತ್ತಿತರರು ಕೂತಿದ್ದ ಬಾಹ್ಯಾಕಾಶದ ನೌಕೆ ಭೂಮಿಗೆ ಹತ್ತಿರ ಆಗುತ್ತಿದ್ದಂತೆ ಭಯ ಕೂಡ ಹೆಚ್ಚಾಗಿತ್ತು. ಏಕೆಂದರೆ ಭೂಮಿ ಗುರುತ್ವದ ಜೊತೆಗೆ ಸಂಘರ್ಷ ಹೆಚ್ಚಾಗಿ ಬೆಂಕಿ ಹೊತ್ತಿಕೊಳ್ಳುವ ಭಯ ಕಾಡಿತ್ತು.
ನಾಸಾ ವಿಜ್ಞಾನಿ ಸುನಿತಾ ವಿಲಿಯಮ್ಸ್ & ಬುಚ್ ವಿಲ್ಮೋರ್ ದೊಡ್ಡ ಸಂಷಕ್ಟಕ್ಕೆ ಸಿಲುಕಿದ್ದರು. ಸುನಿತಾ ವಿಲಿಯಮ್ಸ್ & ಬುಚ್ ವಿಲ್ಮೋರ್ ಒಟ್ಟಾಗಿ 2024ರ ಜೂನ್ 5 ರಂದು ಬೋಯಿಂಗ್ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯಲ್ಲಿ ಗಗನಕ್ಕೆ ಹಾರಿದ್ದರು. ಕೇವಲ 8 ದಿನಗಳ ಕಾಲ ಅಲ್ಲಿ ಉಳಿದು, ಕಾರ್ಯಾಚರಣೆ ನಡೆಸಲು ಪ್ಲಾನ್ ಮಾಡಲಾಗಿತ್ತು.
ದಿಢಿರ್ ಅಂತಾ ತಾಂತ್ರಿಕ ಸಮಸ್ಯೆ ಎದುರಾಗಿ ಗಗನಯಾತ್ರಿಗಳನ್ನ ಬಾಹ್ಯಾಕಾಶದಲ್ಲಿಯೇ ಬಿಟ್ಟು ಸ್ಟಾರ್‌ಲೈನರ್ ಭೂಮಿಗೆ ಮರಳಿ ಬಂದಿತ್ತು. ಹೀಗಾಗಿ ಕಳೆದ 9 ತಿಂಗಳಿಂದ ಅಲ್ಲಿಯೇ ಸಿಲುಕಿ ಒದ್ದಾಡಿದ್ದರು. ಆದರೆ, ಇದೀಗ ಎಲ್ಲಾ ಸಂಕಷ್ಟಗಳು ದೂರವಾಗಿವೆ. ನಾಸಾ ಸಂಸ್ಥೆ ಜೊತೆಗೆ ಸ್ಪೇಸ್ ಎಕ್ಸ್ ಕೂಡ ಸಾಥ್ ನೀಡಿ ಇದೀಗ ಸಮಸ್ಯೆ ಸರಿ ಮಾಡಿದೆ. ವಿಜ್ಞಾನಿಗಳನ್ನ ಇದೀಗ ಭೂಮಿಗೆ ಯಶಸ್ವಿಯಾಗಿ ಕರೆದುಕೊಂಡು ಬರಲಾಗಿದೆ.
ಅಂದಹಾಗೆ ಸುನಿತಾ ವಿಲಿಯಮ್ಸ್ ಅವರು ಭೂಮಿಗೆ ಬರುತ್ತಿದ್ದಂತೆ ನಾಸಾ ಸಂಸ್ಥೆ ವಿಜ್ಞಾನಿ ಬಳಗ ಕುಣಿದಾಡಿತು. ಹಾಗೇ ಸುನಿತಾ ವಿಲಿಯಮ್ಸ್ ಅವರ ಅಭಿಮಾನಿಗಳು ಕೂಡ ಸಿಹಿಸುದ್ದಿ ಕೇಳಿ ಸಂಭ್ರಮಿಸಿದ್ದಾರೆ. ಹಾಗೇ ಇನ್ನೂ ಹಲವು ದಿನಗಳ ಕಾಲ ಸುನಿತಾ ವಿಲಿಯಮ್ಸ್ ಅವರು ಕ್ವಾರಂಟೈನ್‌ಗೆ ಒಳಪಡಲಿದ್ದು, ಆ ನಂತರ ಅವರು ಮುಕ್ತವಾಗಿ ಹೊರಗೆ ಓಡಾಡಲಿದ್ದಾರೆ. ಹಲವು ತಿಂಗಳ ಕಾಲ ಬಾಹ್ಯಾಕಾಶದಲ್ಲಿ ಇದ್ದ ಕಾರಣಕ್ಕೆ ಅವರಿಗೆ ಚಿಕಿತ್ಸೆ ಅಗತ್ಯತೆ ಇದ್ದು, ಇದಕ್ಕೆ ಬೇಕಾದ ವ್ಯವಸ್ಥೆ ಮಾಡಲಾಗಿದೆ