Viral : ಕೆಲವೇ ಗಂಟೆಯಲ್ಲಿ ಘಟಿಸುತ್ತೆ ಸೂರ್ಯ ಗ್ರಹಣ, ಆರಂಭ-ಅಂತ್ಯ ಸಮಯ ಯಾವಾಗ?


ಕೆಲವೇ ಗಂಟೆಯಲ್ಲಿ ಘಟಿಸುತ್ತೆ ಸೂರ್ಯ ಗ್ರಹಣ, ಆರಂಭ-ಅಂತ್ಯ ಸಮಯ ಯಾವಾಗ?

2025ರ ಸಾಲಿನ ಮೊದಲ ಸೂರ್ಯಗ್ರಹಣ ಇಂದು ನಡೆಯಲಿದೆ. ಈ ಸೂರ್ಯಗ್ರಹಣ ಎಲೆಲ್ಲಾ ಗೋಚರವಾಗಲಿದೆ? ಸೂರ್ಯ ಗ್ರಹಣದ ಆರಂಭ ಹಾಗೂ ಮುಕ್ತಾಯ ಸಮಯ? ಸೂತಕ ಸಮಯ ಸೇರಿದಂತ ಎಲ್ಲಾ ಮಾಹಿತಿ ಇಲ್ಲಿದೆ. 

2025ರ ಮೊದಲ ಸೂರ್ಯಗ್ರಹಣ ವೀಕ್ಷಿಸಲು ವಿಜ್ಞಾನಿಗಳು ಸಜ್ಜಾಗಿದ್ದಾರೆ. ವಿಜ್ಞಾನಿಗಳಿಗೆ ಬಾಹ್ಯಾಕಾಶದ ಕೌತಕವಾಗಿದ್ದರೆ, ಭಾರತೀಯರಿಗೆ ಗ್ರಹಣ ಕೇವಲ ವಿಜ್ಞಾನ ಮಾತ್ರವಲ್ಲ, ಇದು ಮನುಷ್ಯನ ಜೀವನದ ಪ್ರಮುಖ ಭಾಗವೂ ಹೌದು.  ಚೈತ್ರ ಮಾಸದ ಶುಕ್ಲ ಪಕ್ಷದ ಅಮಾವಾಸ್ಯೆ ತಿಥಿಯಲ್ಲಿ ಈ ಸೂರ್ಯಗ್ರಹಣ ಘಟಿಸುತ್ತದೆ. 

ಇಂದು ಅಂದರೆ ಮಾರ್ಚ್ 29ಕ್ಕೆ ಈ ವರ್ಷದ ಮೊದಲ ಸೂರ್ಯ ಗ್ರಹಣ ನಡೆಯಲಿದೆ.  ಆದ್ರೆ, ಈ ಸಲ ಇದು ಪೂರ್ತಿ ಸೂರ್ಯಗ್ರಹಣ ಅಲ್ಲ. ಇವತ್ತು ಮಧ್ಯಾಹ್ನ 2 ಗಂಟೆ 21 ನಿಮಿಷಕ್ಕೆ ಸೂರ್ಯಗ್ರಹಣ ಶುರು. ಮುಗಿಯೋದು ಸಂಜೆ 6 ಗಂಟೆ 14 ನಿಮಿಷಕ್ಕೆ. ಈ ಗ್ರಹಣದ ಒಟ್ಟು ಟೈಮ್ 3 ಗಂಟೆ 53 ನಿಮಿಷ.

ದಕ್ಷಿಣ ಅಮೆರಿಕ, ಉತ್ತರ ಅಮೆರಿಕದ ಸ್ವಲ್ಪ ಭಾಗ, ಉತ್ತರ ಏಷ್ಯಾ, ಉತ್ತರ ಧ್ರುವ, ಆರ್ಕ್ಟಿಕ್ ಸಾಗರ ಮತ್ತೆ ಅಟ್ಲಾಂಟಿಕ್ ಸಾಗರ ಸೇರಿ ನ್ಯೂಯಾರ್ಕ್ ಸಿಟಿ, ಬೋಸ್ಟನ್, ಮಾಂಟ್ರಿಯಲ್ ಮತ್ತೆ ಕ್ಯೂಬೆಕ್​ನಿಂದ ಸೂರ್ಯ ಗ್ರಹಣ ವೀಕ್ಷಿಸಲು ಸಾಧ್ಯವಿದೆ. ಕೆಲವೇ ಪ್ರದೇಶಗಳಲ್ಲಿ ಈ ಮಾತ್ರ ವರ್ಷದ ಮೊದಲ ಸೂರ್ಯಗ್ರಹಣ ಗೋಚರಿಸಲಿದೆ.

ಆಫ್ರಿಕಾ, ಸೈಬೀರಿಯಾ, ಕೆರಿಬಿಯನ್ ಮತ್ತೆ ಯುರೋಪ್​ನಲ್ಲೂ ಸೂರ್ಯಗ್ರಹಣ ಗೋಚರಿಸಲಿದೆ. ಆದರೆ ಭಾರತದಲ್ಲಿ ಈ ಸೂರ್ಯಗ್ರಹಣ ಗೋಚರಿಸವುುದಿಲ್ಲ.   ಈ ಸೂರ್ಯಗ್ರಹಣದಲ್ಲಿ ಚಂದ್ರನ ನೆರಳು ನಮ್ಮ ದೇಶದ ಮೇಲೆ ಬೀಳಲ್ಲ. ಹೀಗಾಗಿ ಭಾರತದಲ್ಲಿ ಸೂರ್ಯಗ್ರಹಣ ಗೋಚರಿಸುವದಿಲ್ಲ. ಭಾರತದಲ್ಲಿ ಸೂರ್ಯಗ್ರಹಣ ಘಟಿಸದ ಕಾರಣ ಧಾರ್ಮಿಕವಾಗಿ ಇಲ್ಲಿ ಯಾವುದೇ ಸೂತಕ ಸಮಯವಿರುವುದಿಲ್ಲ.

ಧಾರ್ಮಿಕವಾಗಿ ನೋಡೋದಾದ್ರೆ ಸೂರ್ಯಗ್ರಹಣದ ಸಮಯ ಅಶುಭ ಎಂದು ಹೇಳಲಾಗುತ್ತದೆ. ಈ ಟೈಮ್​ನಲ್ಲಿ ಒಳ್ಳೆ ಕೆಲಸ ಮಾಡುವುದಿಲ್ಲ. ಕಾರಣ ಸೂರ್ಯ ಭಾರತೀಯರಿಗೆ ದೇವರು. ಸೂರ್ಯ ಕಿರಣವಿಲ್ಲದ ಯಾರು ಬದುಕಲು ಸಾಧ್ಯವಿಲ್ಲ. ಹೀಗಾಗಿ ಒಂದು ಕ್ಷಣ ಸೂರ್ಯ ಕಿರಣಗಳು ಭೂಮಿಯಿಂದ ಮರೆಯಾದರೆ ಕೆಟ್ಟ ಬ್ಯಾಕ್ಟಿರಿಯಾ ಸೇರಿದಂತೆ ಕೆಟ್ಟ ಜೀವಾಣುಗಳು ಆಹಾರಗಳಲ್ಲಿ ಸೇರಿಕೊಳ್ಳುತ್ತದೆ. ಇನ್ನು ಶುಭ ಕಾರ್ಯಗಳಿಗೂ ಸೂರ್ಯನ ಬೆಳಕಿನಲ್ಲಿ ತೊಡಕಿರಬಾರದು. ಸೂರ್ಯನ ಕಿರಣಗಳ ಆಶೀರ್ವಾದಿಂದಲೇ ಶುಭಕಾರ್ಯಗಳು ಆರಂಭಗೊಳ್ಳುತ್ತದೆ. ಹೀಗಾಗಿ ಗ್ರಹಣದ ವೇಳೆ ಶುಭ ಕಾರ್ಯ ಮಾಡುವುದಿಲ್ಲ. 

ಸಾಮಾನ್ಯವಾಗಿ ಸೂರ್ಯಗ್ರಹಣ ಶುರುವಾಗೋಕೆ 9 ರಿಂದ 12 ಗಂಟೆ ಮುಂಚೆ ಸೂತಕ ಕಾಲ ಶುರುವಾಗುತ್ತೆ. ಗ್ರಹಣ ಕಾಣ್ಸಿದ್ರೆ ಸೂತಕ ಕಾಲ ಇರುತ್ತೆ.ಇದು ವರ್ಷದ ಮೊದಲ ಸೂರ್ಯಗ್ರಹಣ. ಈ ಸಲ ಗ್ರಹಣದಲ್ಲಿ ವಿಚಿತ್ರ ಯೋಗ ಕೂಡಿ ಬರ್ತಿದೆ. 199 ವರ್ಷದ ನಂತರ ಈ ಯೋಗ ಬರುತ್ತೆ.ಗ್ರಹಣದ ಟೈಮ್​ನಲ್ಲಿ ಆರು ಗ್ರಹಗಳು ಒಂದಾಗುತ್ತಿವೆ. ಅದಕ್ಕೆ ಕೆಲವು ರಾಶಿಗಳಿಗೆ ಅದೃಷ್ಟ ಖುಲಾಯಿಸುತ್ತೆ.

Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">