134 ನೇ ಅಂಬೇಡ್ಕರ್ ಜಯಂತೋತ್ಸವ ಅಧ್ಯಕ್ಷರಾಗಿ ಶಿವುಕುಮಾರ್ ಗಿರಿಪ್ಪನೋರ್ ಆಯ್ಕೆ
ಯಾದಗಿರಿ : ಕೋಟೆಗಾರವಾಡ ನಗರದಲ್ಲಿ ಭೋದಿ ಸತ್ವ, ಸಂವಿಧಾನ ಶಿಲ್ಪಿ,ಡಾ. ಬಿ.ಆರ್ ಅಂಬೇಡ್ಕರ್ 134 ನೇ ಜಯಂತೋತ್ಸವದ ಅಂಗವಾಗಿ ಪೂರ್ವಭಾವಿ ಸಭೆಯನ್ನು ಕರೆಯಲಾಗಿದ್ದು ಸಭೆಯ ಅಧ್ಯಕ್ಷತೆಯನ್ನು ಮಾಜಿ ಅಧ್ಯಕ್ಷರಾದ ಶ್ರೀ ತಾಯಪ್ಪ ಭಂಡಾರಿ ಅವರು ವಹಿಸಿದರು ಅದೇ ರೀತಿ ನಗರದ ಹಿರಿಯ ಮುಖಂಡರಾದ ಚಂದಪ್ಪ ಮುನಿಯಪ್ಪನವರ್, ಚಂದ್ರಕಾಂತ್ ಮುನಿಯಪ್ಪನೂರ್, ಸೈದಪ್ಪ ಕೂಲೂರ್,ನಗರದ ಹಿರಿಯ ಕಿರಿಯರು ಸರ್ವನುಮತದಿಂದ 134 ನೇ ಅಂಬೇಡ್ಕರ್ ಜಯಂತೋತ್ಸವದ ಅಧ್ಯಕ್ಷರನ್ನಾಗಿ ಶ್ರೀ ಶಿವಕುಮಾರ್ ಗಿರೆಪ್ನೋರ ಹಾಗೂ ಗೌರವ ಅಧ್ಯಕ್ಷರನ್ನಾಗಿ ಸೈದಪ್ಪ ಕೂಲೂರಕರ್,ರವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸುರೇಶ ನಾಯಕ್,ಬಸಪ್ಪ ಗಿರಿಪ್ಪನೋರ್,ಆಂಜನೇಯ ಕೌಳೂರ್,ಮಲ್ಲಪ್ಪ ಹಳ್ಳಿ, ಬಸಪ್ಪ ಕಾಂಚಗಾರಳ್ಳಿ,ತಿಪ್ಪಣ್ಣ ಹಳಿಗೇರಿ, ಬಸಪ್ಪ ಅರಿಕೇರಿ, ಮಂಜುನಾಥ ಹಳ್ಳಿ,ರಾಹುಲ್ ಕೊಲ್ಲೂರಕರ್,ರಮೇಶ್ ಕ್ಯಾತ್ನಾಳ್, ಅನೇಕರು ಹಾಜರಿದ್ದರು.