2nd PU Results: ಕೋರಿ ಅಂಬಿಕಾ ಗೆ ಕಂಪ್ಲಿ ತಾಲೂಕಿನಲ್ಲಿ ಪ್ರಥಮ ಸ್ಥಾನ: ಮದರ್ ತೆರೇಸಾ ಪಿಯು ಕಾಲೇಜಿಗೆ ಗೌರವ


ಕೋರಿ ಅಂಬಿಕಾ ಗೆ ಕಂಪ್ಲಿ ತಾಲೂಕಿನಲ್ಲಿ ಪ್ರಥಮ ಸ್ಥಾನ: ಮದರ್ ತೆರೇಸಾ ಪಿಯು ಕಾಲೇಜಿಗೆ ಗೌರವ

ಕಂಪ್ಲಿ: ದ್ವಿತೀಯ ಪಿಯುಸಿ ಫಲಿತಾಂಶ ಇಂದು ಪ್ರಕಟವಾಗಿದ್ದು, ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಮದರ್ ತೆರೇಸಾ ಪಿಯು ಕಾಲೇಜಿನ ವಿದ್ಯಾರ್ಥಿನಿ ಕೋರಿ ಅಂಬಿಕಾ ವಾಣಿಜ್ಯ ವಿಭಾಗದಲ್ಲಿ ಒಟ್ಟು 584 ಅಂಕಗಳು (97.33%) ಪಡೆದು ತಾಲೂಕಿಗೆ ಪ್ರಥಮ ಸ್ಥಾನ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ಸಾಧನೆಯು ಕಂಪ್ಲಿಗೆ ಗೌರವ ತಂದುಕೊಟ್ಟಿದೆ.

ಕಲಾ ವಿಭಾಗದಲ್ಲಿ ವಿದ್ಯಾರ್ಥಿನಿ ಜಡೇಮ್ಮ ಅವರು 538 ಅಂಕಗಳು (89.66%) ಪಡೆದು ಉತ್ತಮ ಫಲಿತಾಂಶ ಗಳಿಸಿದ್ದಾರೆ.

ಇದೆ ರೀತಿಯಾಗಿ,ಡಿ. ಚೈತ್ರ (ವಾಣಿಜ್ಯ): 522 ಅಂಕಗಳು (87%)

ಪುಷ್ಪವತಿ ವಿಶ್ವಕರ್ಮ (ವಾಣಿಜ್ಯ): 520 ಅಂಕಗಳು (86.66%)

ಒಟ್ಟು 25 ವಿದ್ಯಾರ್ಥಿನಿಯರು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದು, ಕಾಲೇಜಿನ ಶ್ರೇಷ್ಟತೆಯನ್ನು ತೋರಿಸಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರು ಹರ್ಷ ವ್ಯಕ್ತಪಡಿಸಿದ್ದಾರೆ.

ಕಾಲೇಜಿನ ಆಡಳಿತ ಮಂಡಳಿ ಹಾಗೂ ಉಪನ್ಯಾಸಕ ವೃಂದವು ವಿದ್ಯಾರ್ಥಿನಿಯರ ಸಾಧನೆಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ.


Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">