ಡಾಕ್ಟರ್ ಬಿ.ಆರ್.ಅಂಬೇಡ್ಕರ್ ಒಂದೇ ಜಾತಿಗೆ ಸಿಮಿತವಲ್ಲ : H ಪಂಪಾಪತಿ


ಡಾಕ್ಟರ್ ಬಿ.ಆರ್.ಅಂಬೇಡ್ಕರ್ ಒಂದೇ ಜಾತಿಗೆ ಸಿಮಿತವಲ್ಲ ಹೆಚ್ ಪಂಪಾಪತಿ.

ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ಮುನಿರಬಾದ್ ಬಳಿ ಸಂವಿಧಾನ ಶಿಲ್ಪಿ ಡಾಕ್ಟರ್ ಬಿ.ಆರ್.ಅಂಬೇಡ್ಕರ್ ರವರ 134ನೇ ಜನ್ಮದಿನಾಚರಣೆ ಹಾಗೂ ಮಾಜಿ ಪ್ರಧಾನಿ ಡಾಕ್ಟರ್ ಬಾಬು ಜಗಜೀವನರಾಮ್ ಅವರ 118ನೇ ಜನ್ಮದಿನಾಚರಣೆಯನ್ನು ಶುಕ್ರವಾರ ಅದ್ದೂರಿಯಾಗಿ ಆಚರಣೆ ಮಾಡಲಾಯಿತು.

ಈ ಕಾರ್ಯಕ್ರಮದಲ್ಲಿ ಎಮ್ಮಿಗನೂರಿನ ಅಂಬೇಡ್ಕರ್ ವಿಚಾರವಾದಿಗಳು ಪಂಪಾಪತಿ ಹೆಚ್. ಅವರು ಮಾತನಾಡಿ  ಪ್ರಬುದ್ದ ಭಾರತದ ನಿರ್ಮಾಣದಲ್ಲಿ ಡಾಕ್ಟರ್ ಅಂಬೇಡ್ಕರ್ ಅವರ ಪಾತ್ರ ಹಾಗೂ ಹಸಿರು ಕ್ರಾಂತಿಯ ಹರಿಕಾರ ಡಾಕ್ಟರ್ ಬಾಬು ಜಗಜೀವನ್ ರಾಮ್ ಅವರ ಕೊಡುಗೆಗಳ ಕುರಿತು ಉಪನ್ಯಾಸ ನೀಡಿದರು.

ಜೊತೆಗೆ ಅಂಬೇಡ್ಕರ್ ಸಾಹೇಬ್ರು ಒಂದೇ ಜಾತಿಗೆ ಸಿಮಿತವಲ್ಲ ಅವರು ಎಲ್ಲಾ ಜಾತಿ ಜನಾಂಗಕ್ಕೆ ಸೇರಿದವರು. ಹಾಗೂ ಎಲ್ಲಾ ನಾಗರೀಕರು ಅಂಬೇಡ್ಕರ್ ವಿಚಾರಧಾರೆಗಳನ್ನು ಅರಿಯಬೇಕು.

 ಅಂಬೇಡ್ಕರ್ ಜೀವನ ಚರಿತ್ರೆಯ ಜೊತೆಗೆ ಅವರ ತತ್ವ ಆದರ್ಶಗಳನ್ನು ಇಂದಿನ ಯುವ ಪೀಳಿಗೆ ಅಳವಡಿಸಿಕೊಳ್ಳುವಲ್ಲಿ ಮುಂದಾಗಬೇಕು ಎಂದು ತಿಳಿಸಿದರು.

ನಂತರ ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ಮುನಿರಬಾದ್ ವಿಭಾಗದ ಮುಖ್ಯಸ್ಥರಾದ ಶ್ರೀಯುತ ಮಹೇಶ್ ಮಠಪತಿ ಯವರು ಶೊಷಿತ ಜನರ ಮತ್ತು ವಿಶೇಷವಾಗಿ ಮಹಿಳೆಯರ ಉನ್ನತಿಗಾಗಿ ಶ್ರಮಿಸಿದ ಅಂಬೇಡ್ಕರ್ ಅವರ ಬದುಕು ಬರಹ ಅವರ ಜೀವನವನ್ನು ನಾವು ಅರ್ಥಮಾಡಿಕೊಳ್ಳಬೇಕು. ಅವರು ತಮ್ಮನ್ನು ಅವಮಾನಿಸಿದ. ನೋವು ನೀಡಿದ ಹಾಗೂ ತಮ್ಮನ್ನು ಶೋಷಣೆ ಮಾಡಿದವರನ್ನು ವಿರೋದಿಸದೆ ಸರ್ವ ಜನಾಂಗದವರನ್ನು ಪ್ರೀತಿಸಿದ ಮಹಾನ್ ಮಾನವತಾವಾದಿಗಳಾಗಿದ್ದರು ಎಂದರು.

ಇದೇ ವೇಳೆ ವಿದ್ಯುತ್ ನಿಗಮದ ವತಿಯಿಂದ ಅಂಬೇಡ್ಕರ್ ವಿಚಾರವಾದಿ ಹೆಚ್ ಪಂಪಪತಿಯವರನ್ನು ಹೃದಯ ಪೂರ್ವಕ ಗೌರವಿಸುವದರ ಮೂಲಕ ಕಿರುಕಾಣಿಕೆ ನೀಡಿ ಸನ್ಮಾನಿಸಲಾಯಿತು. 

ಈ ಸಂದರ್ಭದಲ್ಲಿ  ಕಾರ್ಯಕ್ರಮದಲ್ಲಿ ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ಮುನಿರಬಾದ್ ನ ಇಂಜಿನಿಯರ್ ಗಳು ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">