ಕಂಪ್ಲಿ: ಕರ್ನಾಟಕದ ಪ್ರತಿಭಾವಂತ ಪೊಲೀಸ್ ಅಧಿಕಾರಿ(ಕಂಪ್ಲಿ ಪೊಲೀಸ್ ವೃತ್ತ ನಿರೀಕ್ಷಕ) ಕೆ. ಬಿ. ವಾಸು ಕುಮಾರ್ ಅವರಿಗೆ 2022-23ನೇ ಸಾಲಿನ ಮುಖ್ಯಮಂತ್ರಿಗಳ ಪೊಲೀಸ್ ಪದಕ ಲಭಿಸಿದೆ. ಈ ಪ್ರಶಸ್ತಿ ಅವರು ದಕ್ಷ ಸೇವೆ ಮತ್ತು ಮಹತ್ವದ ಪ್ರಕರಣಗಳನ್ನು ಯಶಸ್ವಿಯಾಗಿ ಬಗೆಹರಿಸಿದ ಪ್ರತಿಫಲವಾಗಿ ನೀಡಲಾಗಿದೆ.
ಇವರು ಇತ್ತೀಚೆಗೆ ಪೊಲೀಸ್ ಇಲಾಖೆಯ ಅಪರೂಪದ ಕೊಡುಗೆಗಾಗಿ ಗುರುತಿಸಿಕೊಂಡಿದ್ದರು. 2022-23ರಲ್ಲಿ, ಕಾನೂನು ಮತ್ತು ಸುವ್ಯವಸ್ಥೆ ಕಾಯ್ದುಕೊಳ್ಳುವಲ್ಲಿ ವಿಶೇಷ ಸೇವೆ ಸಲ್ಲಿಸಿರುವ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿಗಳ ಪದಕವನ್ನು ಘೋಷಿಸಲಾಗಿದೆ.