Kampli : ಸಿಪಿಐ ವಾಸುಕುಮಾರ್ ರವರಿಗೆ ಸಿಎಂ ಪದಕ: ಅಭಿನಂದನೆ


ಸಿಪಿಐ ವಾಸುಕುಮಾರ್ ರವರಿಗೆ ಸಿಎಂ ಪದಕ: ಅಭಿನಂದನೆ

ಕಂಪ್ಲಿ: ಕಂಪ್ಲಿ ವೃತ್ತ ನಿರೀಕ್ಷಕ ಕೆ.ಬಿ. ವಾಸುಕುಮಾರ್ ರವರು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ನೀಡಿದ ಅಮೂಲ್ಯ ಸೇವೆಗಾಗಿ "ಮುಖ್ಯಮಂತ್ರಿ ಪದಕ" ಗೌರವಕ್ಕೆ ಪಾತ್ರರಾಗಿದ್ದಾರೆ. ಈ ಗೌರವವನ್ನು ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಅವರಿಗೆ ಪ್ರಧಾನ ಮಾಡಲಾಯಿತು.

ಈ ಅದ್ದೂರಿ ಸಾಧನೆಗೆ ಮೆಟ್ರಿ ಗ್ರಾಮ ಪಂಚಾಯಿತಿ ಸದಸ್ಯರು ಗಿರೀಶ್, ಕುಮಾರಸ್ವಾಮಿ ಹಾಗೂ ಎಸ್ಡಿಎಂಸಿ ಸದಸ್ಯ ಜಗದೀಶ್ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಅವರ ಸೇವೆಗೆ ಮೆಟ್ರಿ ಗ್ರಾಮಸ್ಥರು ಮತ್ತು ಸ್ಥಳೀಯ ನಾಯಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಈ ಸಾಧನೆಯು ಕಂಪ್ಲಿ ತಾಲೂಕಿನ ಪೊಲೀಸರ ಕಾರ್ಯನಿಷ್ಠೆಗೆ ಗೌರವ ತರುವಂತಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.


Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">