Kampli : ನರೇಗಾ ಕಾಮಗಾರಿ ಸ್ಥಳಕ್ಕೆ ಉಪ ಕಾರ್ಯದರ್ಶಿಗಳ ಭೇಟಿ – ಕೂಲಿ ಕಾರ್ಮಿಕರೊಂದಿಗೆ ಸಂವಾದ


ನರೇಗಾ ಕಾಮಗಾರಿ ಸ್ಥಳಕ್ಕೆ ಉಪ ಕಾರ್ಯದರ್ಶಿಗಳ ಭೇಟಿ – ಕೂಲಿ ಕಾರ್ಮಿಕರೊಂದಿಗೆ ಸಂವಾದ

ಕಂಪ್ಲಿ ತಾಲೂಕಿನಲ್ಲಿ ನರೇಗಾ (NAREGA) ಯೋಜನೆಯಡಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ಇಂದು ಬೆಳಿಗ್ಗೆ ಉಪ ಕಾರ್ಯದರ್ಶಿಗಳು, ಜಿಲ್ಲಾ ಪಂಚಾಯತ್ ಬಳ್ಳಾರಿಯ ಗೀರಿಜ್ ಶಂಕರ್ ರವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಅವರು ದೇವಲಾಪುರ ಹಾಗೂ ಹಂಪಾದೇವನಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಕಾಮಗಾರಿಗಳ ಸ್ಥಳಕ್ಕೆ ಭೇಟಿ ನೀಡಿ, ನೇರವಾಗಿ ಕೂಲಿ ಕಾರ್ಮಿಕರೊಂದಿಗೆ ಮಾತುಕತೆ ನಡೆಸಿದರು.

ಈ ಸಂವಾದದಲ್ಲಿ ಅವರು ತಮ್ಮ ಗಮನವನ್ನು ಪ್ರಮುಖ ಆರು ವಿಚಾರಗಳತ್ತ ಹರಿಸಿದರು:

1. ಕೂಲಿಯ ಪ್ರಮಾಣ ಹಾಗೂ ಪಾವತಿ ಸಮಯದ ಬಗ್ಗೆ ಮಾಹಿತಿ ಪಡೆದರು

2. NMMS ಹಾಜರಾತಿ ಪ್ರಕ್ರಿಯೆ ಕುರಿತು ಚರ್ಚೆ

3. ಕೆಲಸದ ಪ್ರಮಾಣಕ್ಕೆ ತಕ್ಕಂತೆ ಕೂಲಿ ನೀಡುವಿಕೆ ಕುರಿತು ಪರಿಶೀಲನೆ

4. ಕೂಲಿ ಕಾರ್ಮಿಕರ ಮಕ್ಕಳು ಪಂಚಾಯತ್ ವ್ಯಾಪ್ತಿಯ ಕೂಸಿನ ಮನೆಯಲ್ಲಿ ಇರಿಸಲು ಸಲಹೆ

5. PMJJBY ಹಾಗೂ PMSBY ವಿಮಾ ಯೋಜನೆಗಳ ಮಹತ್ವವನ್ನೇ ವಿವರಿಸಿದರು

6. ಸ್ಥಳದಲ್ಲಿ ಪ್ರಥಮ ಚಿಕಿತ್ಸೆ ಪೆಟ್ಟಿಗೆ ಲಭ್ಯತೆಯ ಅಗತ್ಯತೆ ಕುರಿತು ಸೂಚನೆ ನೀಡಿದರು.

ಹಂಪಾದೇವನಹಳ್ಳಿಯ ಕೂಸಿನ ಮನೆಗೂ ಅವರು ಭೇಟಿ ನೀಡಿ, ಮಕ್ಕಳ ಆರೈಕೆ, ಪೌಷ್ಟಿಕ ಆಹಾರ ವಿತರಣೆಯ ಬಗ್ಗೆ ಆರೈಕೆದಾರರೊಂದಿಗೆ ಸಮಾಲೋಚನೆ ನಡೆಸಿದರು.

ಈ ಸಂದರ್ಭದಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀಕುಮಾರ್ R.K, ಸಹಾಯಕ ನಿರ್ದೇಶಕರಾದ ಮಲ್ಲನಗೌಡ, PDO ಬೀರಲಿಂಗಪ್ಪ, ಹಾಗೂ TC, TIEC, TAE, GKM ಮತ್ತಿತರರು ಉಪಸ್ಥಿತರಿದ್ದರು.

Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">